➤ ಪ್ಯಾರಿಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯ (International Space Summit 2026) ಮೊದಲ ಆವೃತ್ತಿಯಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ನಡುವೆ 3 ಹೊಸ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ, ಕಣ್ಣಾವಲು ಮತ್ತು ಉಪಗ್ರಹ ಉಡಾವಣಾ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಮತ್ತಷ್ಟು ಬಲಗೊಂಡಿದೆ.➤ ಪ್ರಮುಖ 3 ಒಪ್ಪಂದಗಳ ವಿವರ:1. ಸ್ಯಾಫ್ರನ್ ಸ್ಪೇಸ್ (ಫ್ರಾನ್ಸ್) ಮತ್ತು ಧ್ರುವ ಸ್ಪೇಸ್ (ಭಾರತ):- ಮೌಲ್ಯ: 50 ಲಕ್ಷ ಯೂರೊ (ಸುಮಾರು ₹55 ಕೋಟಿ). - ಉದ್ದೇಶ: ಭಾರತದ SBS-III (Space-Based Surveillance-III) ಯೋಜನೆಗಾಗಿ ಫ್ರಾನ್ಸ್ ಸಂಸ್ಥೆಯು ಸಂವಹನ ವ್ಯವಸ್ಥೆ, ಸ್ವಯಂ ನಿಯಂತ್ರಿತ ಪಥದರ್ಶಕ ಸಾಧನಗಳು, ಆಪ್ಟಿಕಲ್ ಪೇಲೋಡ್‌ಗಳು ಮತ್ತು ಗ್ರೌಂಡ್ ಸ್ಟೇಷನ್‌ಗಳನ್ನು ಪೂರೈಸಲಿದೆ. - SBS-III ಯೋಜನೆ: 2027 ರಿಂದ 2030 ರ ಅವಧಿಯಲ್ಲಿ ಬಾಹ್ಯಾಕಾಶ ಕಣ್ಣಾವಲಿಗಾಗಿ (Space Surveillance) 52 ಉಪಗ್ರಹಗಳ ಸಮೂಹವನ್ನು (Constellation) ಭಾರತ ನಿರ್ಮಿಸಲಿದೆ. 2. ರೈಡ್ (RIDE! - ಫ್ರಾನ್ಸ್) ಮತ್ತು ಟೇಕ್‌ಮಿಟುಅರ್ಬಿಟ್ (TakeMeToSpace - ಭಾರತ): - ಫ್ರಾನ್ಸ್‌ನ ಉಡ್ಡಯನ ಸೇವಾದಾತ ಸಂಸ್ಥೆ 'ರೈಡ್' (RIDE!), ಭಾರತದ ಮೊದಲ 'ಆರ್ಬಿಟಲ್ ಡಾಟಾ ಸೆಂಟರ್' (Orbital Data Centre) ವಿನ್ಯಾಸಗೊಳಿಸಿದ ಸ್ಟಾರ್ಟ್‌ಅಪ್ 'TakeMeToSpace' ಗಾಗಿ 2 ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡಿಕೊಡಲಿದೆ. 3. ಯು-ಸ್ಪೇಸ್ (U-Space - ಫ್ರಾನ್ಸ್) ಮತ್ತು ಆ್ಯಕ್ಸಿಸ್‌ಕೇಡ್‌ (AXISCADES - ಭಾರತ): - ಭಾರತದ ಸಣ್ಣ ಉಪಗ್ರಹ (Microsatellite) ಮಾರುಕಟ್ಟೆಯನ್ನು ಅನ್ವೇಷಿಸಲು ಮತ್ತು 'ಮೇಕ್ ಇನ್ ಇಂಡಿಯಾ' (Make in India) ಚೌಕಟ್ಟಿನಡಿಯಲ್ಲಿ ವಾಣಿಜ್ಯ ಹಾಗೂ ಸಾಂಸ್ಥಿಕ ಬೇಡಿಕೆಗೆ ಸ್ಪಂದಿಸಲು ವಾಣಿಜ್ಯ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.