➤ ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು ಹಾಗೂ ನಾವೀನ್ಯತೆ (Innovation) ನಾಯಕರನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳಾಗಿ ರೂಪಿಸುವ ಉದ್ದೇಶದಿಂದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2026, ‘ವಿಕಸಿತ್ ಟೆಕ್ 47’ (Viksit Tech 47) ಎಂಬ ಮಹತ್ವದ ಹೊಸ ವೇದಿಕೆಯನ್ನು ಆರಂಭಿಸಿದೆ.
➤ ಈ ಯೋಜನೆಯು ಭಾರತವನ್ನು ಜಾಗತಿಕ ತಂತ್ರಜ್ಞಾನ ಮೌಲ್ಯ ಸರಪಳಿಯಲ್ಲಿ (Global Technology Value Chain) ಬಲವಾದ ಸ್ಥಾನದಲ್ಲಿ ನಿಲ್ಲಿಸುವ ಗುರಿಯನ್ನು ಹೊಂದಿದೆ. ಈ ಚಟುವಟಿಕೆಯು 'ವಿಕಸಿತ್ ಭಾರತ್ 2047' (Viksit Bharat 2047) ಕಲ್ಪನೆಗೆ ಪೂರಕವಾಗಿದೆ.
➤ ‘ವಿಕಸಿತ್ ಟೆಕ್ 47’ ರ ಪ್ರಮುಖ ಉದ್ದೇಶಗಳು:
- ಆತ್ಮನಿರ್ಭರತೆ ಮತ್ತು ಸ್ವದೇಶಿ ತಂತ್ರಜ್ಞಾನ: ಎಲೆಕ್ಟ್ರಾನಿಕ್ ವಿನ್ಯಾಸ, ಹಾರ್ಡ್‌ವೇರ್ ತಯಾರಿಕೆ ಮತ್ತು ದೇಶೀಯ ಬೌದ್ಧಿಕ ಆಸ್ತಿ (Intellectual Property) ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಬೆಂಬಲ ನೀಡುವುದು.
- ಜಾಗತಿಕ ಬ್ರ್ಯಾಂಡ್ ನಿರ್ಮಾಣ: ಭಾರತೀಯ ಟೆಕ್ ಕಂಪನಿಗಳು ಕೇವಲ ದೇಶೀಯ ಮಾರುಕಟ್ಟೆಗೆ ಸೀಮಿತವಾಗದೆ ಜಾಗತಿಕ ಗುರುತಿಸುವಿಕೆ ಪಡೆಯಲು ಬೆಂಬಲ ನೀಡುವುದು.
- ಸಂಶೋಧನೆ ಮತ್ತು ವರದಿ: 200ಕ್ಕೂ ಹೆಚ್ಚು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು ಪರಿಶೀಲಿಸಿ ಪ್ರಮುಖ ಫ್ಲ್ಯಾಗ್‌ಶಿಪ್ ಸಂಶೋಧನಾ ವರದಿಯನ್ನು IMC 2026 ರ ವೇಳೆಯಲ್ಲಿ ಬಿಡುಗಡೆ ಮಾಡಲಾಗುವುದು.
➤ ಒಳಗೊಂಡಿರುವ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳು:
- ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ (AI and Deep Tech)
- ಸಾಫ್ಟ್‌ವೇರ್ ಆಸ್ ಎ ಸರ್ವಿಸ್ (SaaS) ವೇದಿಕೆಗಳು
- ಕನೆಕ್ಟೆಡ್ ಮೊಬಿಲಿಟಿ ಮತ್ತು ಸ್ಮಾರ್ಟ್ ಹೋಮ್ (IoT)
- ಕನ್ಸೂಮರ್ ಡಿವೈಸ್, ಧರಿಸಬಹುದಾದ ಗ್ಯಾಜೆಟ್‌ಗಳು (Wearables) ಮತ್ತು ಆಡಿಯೋ/ವಿಡಿಯೋ ತಂತ್ರಜ್ಞಾನಗಳು
- ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉತ್ಪಾದನೆ (Components & Manufacturing)
➤ ‘ಡಾ. ಜರಾಬಿ ಸ್ವದೇಶಿ ಉದ್ಯಮ ಪ್ರಶಸ್ತಿ’: ವಿಕಸಿತ್ ಟೆಕ್ 47 ರ ಭಾಗವಾಗಿ ನವೋದ್ಯಮಗಳಿಗೆ (Startups) 'Dr Zarabi Indigenisation Award for Startups' ಪ್ರಶಸ್ತಿಯನ್ನು ಪರಿಚಯಿಸಲಾಗಿದೆ.
ಈ ಮೊದಲು ವಿದೇಶಿ ಆಮದುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದ ಗ್ಯಾಜೆಟ್‌ಗಳು, ಹಾರ್ಡ್‌ವೇರ್, ವೈಜ್ಞಾನಿಕ ಸಾಧನಗಳನ್ನು ಭಾರತದಲ್ಲೇ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ಉತ್ಪಾದಿಸುವ ನವೋದ್ಯಮಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ