➤ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು (Ministry of Ports, Shipping and Waterways) ಒಡಿಶಾದ ಪ್ಯಾರಾದೀಪ್ ಬಂದರಿಗೆ (Paradip Port) ಅಧಿಕೃತವಾಗಿ ‘ಮೆಗಾ ಪೋರ್ಟ್’ (Mega Port) ಸ್ಥಾನಮಾನವನ್ನು ಘೋಷಿಸಿದೆ. ಭಾರತೀಯ ಬಂದರುಗಳ ಕಾಯ್ದೆ, 2025 ರ ಸೆಕ್ಷನ್ 73 ರ ಪ್ರಕಾರ (Indian Ports Act, 2025 - Section 73) ನಿಗದಿಪಡಿಸಿದ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಮೂಲಸೌಕರ್ಯದ ಆಧಾರದ ಮೇಲೆ ಈ ಹೆಗ್ಗಳಿಕೆಯನ್ನು ನೀಡಲಾಗಿದೆ.
➤ ಪೂರ್ವ ಕರಾವಳಿಯ ಏಕೈಕ ಮೆಗಾ ಪೋರ್ಟ್: ಭಾರತದ ಪೂರ್ವ ಕರಾವಳಿಯಲ್ಲಿ (East Coast) ‘ಮೆಗಾ ಪೋರ್ಟ್’ ಸ್ಥಾನಮಾನ ಪಡೆದ ಏಕೈಕ ಬಂದರು ಎಂದರೆ ಅದು ಪ್ಯಾರಾದೀಪ್.
➤ ಸರಕು ಸಾಗಣೆ ಸಾಮರ್ಥ್ಯ (Cargo Capacity): ಪ್ಯಾರಾದೀಪ್ ಬಂದರು 2025-26ರ ಆರ್ಥಿಕ ವರ್ಷದಲ್ಲಿ 156.45 ಮಿಲಿಯನ್ ಟನ್‌ಗಳಷ್ಟು ಸರಕನ್ನು ನಿರ್ವಹಿಸುವ ಮೂಲಕ ತನ್ನ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 4.02 ರಷ್ಟು ಹೆಚ್ಚಳವಾಗಿದೆ.ಈ ಬಂದರು ಪ್ರಮುಖವಾಗಿ ಕಲ್ಲಿದ್ದಲು, ಕಬ್ಬಿಣದ ಅದಿರು (Iron Ore), ರಸಗೊಬ್ಬರ ಮತ್ತು ಕಚ್ಚಾ ತೈಲ (Crude Oil) ಮುಂತಾದ ಬಲ್ಕ್ ಸರಕುಗಳನ್ನು ನಿರ್ವಹಿಸುತ್ತದೆ.
➤ ಒಟ್ಟು 4 ಬಂದರುಗಳಿಗೆ ಮೆಗಾ ಪೋರ್ಟ್ ಸ್ಥಾನಮಾನ: ಭಾರತದಲ್ಲಿ ಒಟ್ಟು ನಾಲ್ಕು ಬಂದರುಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ:
- ಪ್ಯಾರಾದೀಪ್ ಬಂದರು (ಒಡಿಶಾ)
- ದೀನ್‌ದಯಾಳ್ ಬಂದರು / ಕಾಂಡ್ಲಾ (ಗುಜರಾತ್)
- ಜವಾಹರ್‌ಲಾಲ್ ನೆಹರೂ ಬಂದರು - JNPT / ನ್ಹಾವಾ ಶೇವಾ (ಮಹಾರಾಷ್ಟ್ರ - ಮುಂಬೈ)
- ಮುಂಡ್ರಾ ಬಂದರು (ಗುಜರಾತ್ - ಈ ಗುಂಪಿನಲ್ಲಿರುವ ಏಕೈಕ ಖಾಸಗಿ/ಖಾಸಗೀತರ ಅಲ್ಲದ ಪ್ರಮುಖ ಬಂದರು)