* ಬಾಲಿವುಡ್ ನಟ ರಣಭೀರ್ ಕಪೂರ್ ಅಭಿನಯದ 'ಅನಿಮಲ್' ಸಿನಿಮಾ ಇಂಡಿಯನ್ ಇಂಟೆರ್ ನ್ಯಾಷನಲ್ ಫಿಲ್ಮ್ ಅಕಾಡಮಿ (IIFA) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಪೋಷಕ ನಟ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತಂಡದ ಪರವಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಿರ್ಮಾಪಕ ಭೂಷಣ್ ಕುಮಾರ ಪ್ರಶಸ್ತಿಯನ್ನು ಸ್ವೀಕರಿಸಿದರು.
* ಜವಾನ್ ಚಿತ್ರದಲ್ಲಿ ಅತ್ಯುತ್ತಮ ಅಭಿನಯಕ್ಕೆ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
* ಮಿಸಸ್ ಚಟರ್ಜಿ vs ನಾರ್ವೆ‘ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಾಣಿ ಮುಖರ್ಜಿ ಪಡೆದಿದ್ದಾರೆ.
* ’12th ಫೇಲ್‘ ಸಿನಿಮಾ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅತ್ತುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
* ಅನಿಮಲ್ ಸಿನಿಮಾದಲ್ಲಿ ಅಭಿನಯಿಸಿದ್ದ ಅನಿಲ್ ಕಪೂರ್ ಉತ್ತಮ ಪೋಷಕ ನಟ ಪ್ರಶಸ್ತಿ ಮತ್ತು ಬಾಬಿ ಡಿಯೋಲ್ ಅತ್ಯುತ್ತಮ ಖಳ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
IIFA Awards 2024 : 'ಅನಿಮಲ್' ಅತ್ಯುತ್ತಮ ಚಿತ್ರ
Published by Jyoti Angadi
30 ಸೆಪ್ಟೆಂಬರ್ 2024