* ಪ್ರಧಾನಿ ನರೇಂದ್ರ ಮೋದಿಯವರು ತಿಂಗಳದ ಕೊನೆಯಲ್ಲಿ ಭಾನುವಾರ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮವು 10 ವರ್ಷಗಳನ್ನು ಮತ್ತು 114 ಸಂಚಿಕೆಗಳನ್ನು ಪೂರೈಸಿದೆ.
* ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ರಂದು 'ಮನ್ ಕಿ ಬಾತ್' ಭಾಷಣದಲ್ಲಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮವು 10 ವರ್ಷಗಳನ್ನು ಪೂರೈಸಿದ್ದರಿಂದ ಕೇಳುಗರಿಗೆ "ನಿಜವಾದ ನಿರೂಪಕರು" ಎಂದು ಧನ್ಯವಾದ ಅರ್ಪಿಸಿದರು.
* ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನ, ಆಲ್ ಇಂಡಿಯಾ ರೇಡಿಯೊ ಸುದ್ದಿ ವೆಬ್‌ಸೈಟ್ ಮತ್ತು ನ್ಯೂಸ್‌ಆನ್ ಏರ್ ಮೊಬೈಲ್ ಅಪ್ಲಿಕೇಶನ್‌ನ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
* ಕೆಲವೇ ದಿನಗಳಲ್ಲಿ ಅಕ್ಟೋಬರ್ 2ರಂದು ಸ್ವಚ್ಛ ಭಾರತ್ ಮಿಷನ್ 10 ವರ್ಷಗಳನ್ನು ಪೂರೈಸುತ್ತಿದೆ. ಭಾರತೀಯ ಇತಿಹಾಸದಲ್ಲಿ ಇದನ್ನು ಇಷ್ಟು ದೊಡ್ಡ ಜನಾಂದೋಲನವನ್ನಾಗಿ ಮಾಡಿದವರನ್ನು ಅಭಿನಂದಿಸುವ ಸಂದರ್ಭವಿದು ಎಂದರು.
* ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ್ ಮಿಷನ್’ ಅಡಿಯಲ್ಲಿ ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೇಶವಾಸಿಗಳನ್ನು ಒತ್ತಾಯಿಸಿದರು.
* ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಪರಿಚಯಿಸಿ ಹತ್ತು ಪೂರೈಸುತ್ತಿದೆ. ಪ್ರತಿವಾಲಯದ ರಫ್ತು ಮತ್ತು ವಿದೇಶಿ ನೇರ ಹೂಡಿಕೆಯು ಹೆಚ್ಚುತ್ತಿದೆ. ಸ್ಥಳೀಯ ತಯಾರಕರು ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ದಶಕ ಪೂರೈಸಿದ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮ
Published by Jyoti Angadi
30 ಸೆಪ್ಟೆಂಬರ್ 2024