* ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 'ಮೇರಿ ಮಾತಿ ಮೇರಾ ದೇಶ್ (ನನ್ನ ಭೂಮಿ-ನನ್ನ ದೇಶ) ಅಭಿಯಾನವನ್ನು ಪ್ರಾರಂಭಿಸಲಾಗುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 30 ರಂದು ತಿಳಿಸಿದ್ದಾರೆ.
* ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು.
* ನನ್ನ ಭೂಮಿ-ನನ್ನ ದೇಶ ಅಭಿಯಾನದ ಅಡಿಯಲ್ಲಿ ಅಮೃತ ಕಳಸ ಯಾತ್ರೆಯನ್ನು ಆಯೋಜಿಸಲಾಗಿದ್ದು, ಹಾಗೂ 7,500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು ಎಂದರು.
ಪ್ರಧಾನಿ ಮೋದಿ ಅವರು ತಿಳಿಸಿದ ಇತರ ಪ್ರಮುಖ ಅಂಶಗಳು
- ಈ ವರ್ಷವೂ 'ಹರ್ ಘರ್ ತಿರಂಗಾ' ಅಭಿಯಾನ ಆಚರಿಸಲು ಪ್ರಧಾನಿ ಕರೆ
- ದೇಶದ ಪವಿತ್ರ ಸ್ಥಳಗಳಿಗೆ ಹೆಚ್ಚುತ್ತಿರುವ ಯಾತ್ರಿಕರ ಸಂಖ್ಯೆ ಕುರಿತು ಉಲ್ಲೇಖ.
- ನೀರಿನ ಸಂರಕ್ಷಣೆಗಾಗಿ ವಿವಿದೆಡೆ ಜನರ ನೂತನ ಪ್ರಯತ್ನ.
- ಪ್ರವಾಹ ಹಾಗೂ ನೈಸರ್ಗಿಕ ವಿಪತ್ತಿನಿಂದ ಜನರು ಅನುಭವಿಸಿದ ಸಮಸ್ಯೆಗಳ ಕುರಿತು.
- ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕವು ಹಿಂದಿರುಗಿಸಿದರ ಬಗ್ಗೆ ಮಾಹಿತಿ.
ಸೋಮವಾರ, 31 ಜುಲೈ 2023
1:26 ಅಪರಾಹ್ನ
Daily PDF
ಹುತಾತ್ಮ ಯೋಧರ ಸ್ಮರಣಾರ್ಥವಾಗಿ 'ಮೇರಿ ಮಾತಿ ಮೇರಾ ದೇಶ್ 'ಅಭಿಯಾನ ಪ್ರಾರಂಭ
Authored by:
Tajabi Pathan