* ಚಂಡೀಗಢ ರಾಜ್ಯದ ನಿವಾಸಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 75 ರಷ್ಟು ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ 2020ರಲ್ಲಿ ಹರಿಯಾಣ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿಗಳಾದ ಜಿ ಎಸ್ ಸಂಧವಾಲಿಯಾ ಮತ್ತು ಹರ್‌ಪ್ರೀತ್ ಕೌರ್ ಜೀವನ್ ಅವರು ತೀರ್ಪು ಪ್ರಕಟಿಸಿದರು
* ಉಪಮುಖ್ಯಮಂತ್ರಿ ಮತ್ತು ಕಾರ್ಮಿಕ ಖಾತೆ ಸಚಿವರಾದ ದುಶ್ಯಂತ್ ಚೌಟಾಲ ಅವರು ವಿಧೇಯಕ ಮಂಡಿಸಿದರು. ''ಸ್ಥಳೀಯರಿಗೆ ಅವಕಾಶ ನೀಡಿದರೆ ಸಾಮಾಜಿಕ, ಆರ್ಥಿಕ ಮತ್ತು ನೈಸರ್ಗಿಕ ಸಮಾನತೆ ಕಾಯ್ದುಕೊಂಡಂತೆ. ಸದ್ಯ ರಾಜ್ಯದಲ್ಲಿ ವಲಸಿಗರು ಕಡಿಮೆ ವೇತನದ ಕೆಲಸಕ್ಕೆ ಪೈಪೋಟಿಯಲ್ಲಿದ್ದಾರೆ. ಇದರಿಂದಾಗಿ ಪ್ರಾದೇಶಿಕ ಮೂಲಸೌಕರ್ಯ ಮತ್ತು ವಸತಿ ವಲಯಗಳ ಮೇಲೆ ಭಾರಿ ಪರಿಣಾಮ ಉಂಟಾಗುತ್ತಿದೆ,'' ಎಂದು ಡಿಸಿಎಂ ಚೌಟಾಲ ಅಭಿಪ್ರಾಯಪಟ್ಟರು.
ಶನಿವಾರ, 18 ನವೆಂಬರ್ 2023
10:43 ಪೂರ್ವಾಹ್ನ
Daily PDF
ಹರಿಯಾಣ ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ 75 ಮೀಸಲಾತಿ ಕಾನೂನು ರದ್ದು
Authored by:
Yallamma G