* ಭಾರತೀಯ ಸೇನೆಯಲ್ಲಿ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದ್ದು ಇದರ ಅಧ್ಯಾಯನಕ್ಕಾಗಿ ತಂಡವೊಂದನ್ನು ರಚಿಸಲಾಗಿದೆ.
* ಈಗಾಗಲೇ ಅಮೆರಿಕ, ಲಂಡನ್, ಬ್ರಿಟನ್ 19 ದೇಶಗಳ ಸೇನೆಯಲ್ಲಿ ತೃತೀಯಲಿಂಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
* 1974ರಲ್ಲಿ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ನೆದರ್ಲ್ಯಾಂಡ್ ನಲ್ಲಿ ತೃತೀಯ ಲಿಂಗಿಯನ್ನು ಸೇನೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಇದು ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು.
* ಭಾರತವೂ ಕೂಡ ತೃತೀಯ ಲಿಂಗಿಗಳ ನೇಮಕಕ್ಕೆ ಆಸಕ್ತಿ ತೋರಿದ ಅನೇಕ ತೃತೀಯ ಲಿಂಗಿಗಳು ಸರ್ಕಾರಿ ಹಾಗೂ ಸರ್ಕಾರೇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರಿಗೆ ಸೇನೆಯಲ್ಲೂ ಕೂಡ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡಲು ಚಿಂತನೆ ನಡೆಸಲಾಗುತ್ತಿದೆ.
ಭಾರತೀಯ ಸೇನೆಯಲ್ಲಿ ತೃತೀಯ ಲಿಂಗಿಗಳ ನೇಮಕಕ್ಕೆ ಚಿಂತನೆ
Published by Bhagya R K
18 ನವೆಂಬರ್ 2023