* ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆಯಾದ ಹಿನ್ನೆಲೆಯಲ್ಲಿ ಸಿಂಗಾಪುರದ ನಂತರ ಇದೀಗ ಹಾಂಗ್‌ಕಾಂಗ್ ನಲ್ಲೂ ಭಾರತೀಯ ಖ್ಯಾತ ಬ್ರ್ಯಾಂಡ್‌ಗಳಾದ ಎಂಡಿಎಚ್ ಪ್ರೈ. ಲಿ., ಎವರೆಸ್ಟ್ ಫುಡ್ ಪ್ರಾಡಕ್ಟ್ ಪ್ರೈ. ಲಿ.ನ 4 ಮಸಾಲೆ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.
* ಹಾಂಗ್‌ಕಾಂಗ್ ನ ಆಹಾರ ಸುರಕ್ಷತಾ ಕೇಂದ್ರ(ಸಿಎಫ್‌ಸಿ) ಏಪ್ರಿಲ್ 5ರಂದು ಎಂಡಿಎಚ್ ಉತ್ಪನ್ನಗಳಾದ ಮದ್ರಾಸ್ ಕರಿ ಪೌಡರ್, ಮಿಶ್ರ ಮಸಾಲಾ ಪುಡಿ, ಸಾಂಬಾರ್ ಮಸಾಲ ಹಾಗೂ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಎಂಬ ರಾಸಾಯನಿಕ ಇದೆ ಎಂದು ಪ್ರಕಟಿಸಿತ್ತು.
* ಎಂಡಿಎಚ್ ಮತ್ತು ಎವರೆಸ್ಟ್ ಬ್ರ್ಯಾಂಡ್‌ಗಳ ನಾಲ್ಕು ಮಸಾಲೆ ಉತ್ಪನ್ನಗಳನ್ನು ಹಾಂಗ್‌ಕಾಂಗ್ ಮತ್ತು ಸಿಂಗಾಪುರ ನಿಷೇಧಿಸಿದೆ ಎಂಬ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ವರದಿ ಕಳುಹಿಸುವಂತೆ ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ದೇಶನ ನೀಡಿದೆ.
* ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಪದಾರ್ಥದಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೆಡ್ ಎಂಬ ಕೀಟನಾಶಕ ಅಂಶ ಪತ್ತೆಯಾಗಿದೆ.
ಬುಧವಾರ, 24 ಎಪ್ರಿಲ್ 2024
4:28 ಅಪರಾಹ್ನ
Daily PDF
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಉತ್ಪನ್ನಗಳು ನಿಷೇಧ
Authored by:
Yallamma G