* ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುವಾಗ ಅಂದರೆ ಸರಿಸುಮಾರು ಮದ್ಯಾಹ್ನದ ವೇಳೆಗೆ (12. 17 ರಿಂದ 12.33 ರ ವರೆಗೆ) ಈ ಘಟನೆ ಸಂಭವಿಸಲಿದೆ. ಈ ಸಮಯದಲ್ಲಿ ಝೀರೋ ಶ್ಯಾಡೋ ಡೇ ಕುತೂಹಲಕಾರಿ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ
* ಭೂಮಿಯ ಮೇಲೆ ವರ್ಷದಲ್ಲಿ 2 ಅವಧಿಯಂತೆ ಉತ್ತರಾಯಣ ಮತ್ತು ಒಮ್ಮೆ ದಕ್ಷಿಣಾಯಣ ಅವಧಿಯಂತೆ ಎರೆಡೆರಡು ಬಾರಿ ಶೂನ್ಯ ನೆರಳು ಆವರಿಸುತ್ತದೆ. ಈ ದಿನ ಭೂಮಿಯ ಮೇಲ್ಮೈನಲ್ಲಿ ಯಾವುದೇ ಲಂಬ ವಸ್ತುವಿನ ನೆರಳು ಕಾಣುವುದಿಲ್ಲ. ಈ ದಿನ ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ನಮ್ಮ ನೆತ್ತಿಯ ಮೇಲೆ ಇರುವುದಿಲ್ಲ.
* ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದು ಅಥವಾ ಉತ್ತೋಂಗವನ್ನು ತಲಪುತ್ತಾನೆ ಮತ್ತು ನೆರಳಿನ ಉದ್ದವು ಅದನ್ನು ನೋಡಲಾಗದಷ್ಟು ಕಡಿಮೆ ಆಗುತ್ತದೆ ಹಾಗೂ ಉಡುಪಿ, ಬೆಂಗಳೂರ ಸೇರಿದಂತೆ ರಾಜ್ಯದಲ್ಲಿ ಹಲವು ಕಡೆ ಶೂನ್ಯ ನೆರಳಿನ ವಿಸ್ಮಯ ನಡೆಯಲಿದೆ.
ಇಂದು ಶೂನ್ಯ ನೆರಳಿನ ದಿನ
Published by Bhagya R K
24 ಏಪ್ರಿಲ್ 2024