* ಮದುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ 'ಗೃಹ ಅರೋಗ್ಯ' ಯೋಜನೆಯಡಿಯಲ್ಲಿ 3 ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ವಿತರಿಸಲು ಅರೋಗ್ಯ ಇಲಾಖೆ ಮುಂದಾಗಿದೆ.
* ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಗೃಹ ಅರೋಗ್ಯ ಯೋಜನೆ ಜಾರಿ ಮಾಡಲಾಗುತ್ತಿದೆ.
* ಈ ಯೋಜನೆಯನ್ನು ಯಾದಗಿರಿ, ರಾಮನಗರ, ಬಳ್ಳಾರಿ, ಬೆಳಗಾವಿ, ಗದಗ, ತುಮಕೂರು, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ.
* ಈ ಯೋಜನೆಯ ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ತಲಾ 90 ಮಾತ್ರೆಗಳನ್ನು ಒಳಗೊಂಡ ಮಾದರಿ ಔಷಧ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿದೆ.
* ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಿಂದ 764 ಕೋಟಿ ಮೊತ್ತದ ಔಷಧವನ್ನು ಖರೀದಿಸಿ ಒಟ್ಟು 382 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ.
* ಸರ್ಕಾರ ನಿಗದಿಪಸಿದ ಮಾತ್ರೆಗಳು
- ಅಧಿಕ ರಕ್ತದೊತ್ತಡಕ್ಕೆ : ಎಲ್ಲೋಡಿಪೈನ್ 5 ಎಂಜಿ, ಟೆಲ್ಮಿ ಸಾರ್ಟನ್ 40 ಎಂಜಿ, ಕ್ಲೋರ್ತಲಿಡೋನ್ 12.5 ಎಂಜಿ
- ಮಧುಮೇಹಕ್ಕೆ: ಮೆಟ್‌ಫಾರ್ಮಿನ್ ಎಸ್‌ಆರ್ 500 ಎಂಜಿ, ಮಟ್‌ಫಾರ್ಮಿನ್ ಎಸ್‌ಆರ್ 100 ಎಂಜಿ, ಗ್ಲಿಮಿಪ್ರೈಡ್ 1 ಎಂಜಿ
ಶುಕ್ರವಾರ, 06 ಅಕ್ಟೋಬರ್ 2023
12:36 ಅಪರಾಹ್ನ
Daily PDF
ಗೃಹ ಅರೋಗ್ಯ ಯೋಜನೆ ಜಾರಿ : ಮನೆಮನೆಗೆ ಔಷಧ ಪೆಟ್ಟಿಗೆ
Authored by:
Bhagya R K