* ದೆಹಲಿಯು ಅಕ್ಟೋಬರ್ 1, 2022 ರಿಂದ ಸೆಪ್ಟೆಂಬರ್ 30, 2023 ರವರೆಗೆ ದೇಶದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಯು ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯು ವರದಿ ತಿಳಿಸಿದೆ.
* ಪಾಟ್ನಾ 2ನೇ ಅತಿ ಹೆಚ್ಚು ಮಾಲಿನ್ಯದ ನಗರವಾಗಿದ್ದು, ನಂತರ ಮುಜಾಫರ್‌ಪುರ, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್, ಮೀರತ್, ನಲ್ಬರಿ, ಅಸನ್ಸೋಲ್ ಮತ್ತು ಗ್ವಾಲಿಯರ್ ನಂತರದ ಸ್ಥಾನಗಳಲ್ಲಿವೆ.
* ರೆಸ್ಪೈರ್ ಲಿವಿಂಗ್ ಸೈನ್ಸಸ್‌ನ ವರದಿಯ ಪ್ರಕಾರ, ಸಂವೇದಕ ಆಧಾರಿತ ನೆಟ್‌ವರ್ಕ್ ಗಾಳಿಯ ಗುಣಮಟ್ಟ ಮತ್ತು ಹವಾಮಾನ ಪ್ರವೃತ್ತಿಗಳು ಸೇರಿದಂತೆ ವಿವಿಧ ಅಂಶಗಳ ಕುರಿತು ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ.
* ದೆಹಲಿ, ಪಟ್ನಾ, ಮುಜಾಫರ್‌ಪು, ಫರಿದಾಬಾದ್, ನೋಯ್ಡಾ, ಗಾಜಿಯಾಬಾದ್ ಮತ್ತು ಮೀರತ್ ದೇಶದ ಪ್ರಮುಖ ಏಳು ಅತಿ ಹೆಚ್ಚು ಕಲುಷಿತ ನಗರಗಳಾಗಿವೆ.
* ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬರುವ ಫರಿದಾಬಾದ್ (ಪ್ರತಿ ಘನ ಮೀಟಗೆ 89 ಮೈಕ್ರೋಗ್ರಾಂಗಳು). ನೋಯ್ಡಾ (ಪ್ರತಿ ಘನ ಮೀಟರ್‌ಗೆ 79.1 ಮೈಕ್ರೋಗ್ರಾಂಗಳು), ಘಾಜಿಯಾಬಾದ್ 78.3 ಮೈಕ್ರೋಗ್ರಾಂಗಳು ಮತ್ತು ಮೀರತ್ 76.9 ಮೈಕ್ರೋಗ್ರಾಂಗಳು ನಗರಗಳು ಟಾಪ್ 10ರ ಅತ್ಯಂತ ಕಲುಷಿತ ನಗರಗಳ ಸಾಲಿನಲ್ಲಿವೆ.
ಶುಕ್ರವಾರ, 06 ಅಕ್ಟೋಬರ್ 2023
11:11 ಪೂರ್ವಾಹ್ನ
Daily PDF
ಭಾರತದಲ್ಲೇ ಅತ್ಯಂತ ಕಲುಷಿತ ನಗರ ದೆಹಲಿ
Authored by:
Bhagya R K