* ಭಾರತದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಬೆನ್ನಲ್ಲೆ ಈಜಿಪ್ಟ್ ನೊಂದಿಗೆ ಒಪ್ಪಂದವೊಂದನ್ನ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ
* ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈಜಿಪ್ಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು ಒಪ್ಪಂದದ ಮೂಲಕ ಹೆಚ್ಚಿಸಿಕೊಂಡಿವೆ. 2027ರ ವೇಳೆಗೆ ದ್ವಿಮುಖ ವ್ಯಾಪಾರವನ್ನು $12 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.
* ಈಜಿಪ್ಟ್ ಏಪ್ರಿಲ್ 2022 ರಲ್ಲಿ ಭಾರತವನ್ನು ಪ್ರಮಾಣೀಕೃತ ಗೋಧಿ ಪೂರೈಕೆದಾರ ಎಂದು ಅನುಮೋದಿಸಿದ್ದು, ಮೇ 2022 ರಲ್ಲಿ ಭಾರತ ಸರ್ಕಾರವು ಗೋಧಿ ರಫ್ತು ನಿಷೇಧಿಸುವ ಮೊದಲು 63,500 ಟನ್ ಗೋಧಿಗೆ ಈಜಿಪ್ಟ್ ಕಡೆಯಿಂದ ಮೊದಲ ಆದೇಶವನ್ನು ಪಡೆಯಿತು.
* ಈಜಿಪ್ಟ್ ವಿಶ್ವದ ಐದನೇ ಅತಿದೊಡ್ಡ ರಸಗೊಬ್ಬರ ರಫ್ತುದಾರನಾಗಿದ್ದು, ವಾರ್ಷಿಕವಾಗಿ 7.8 ಮಿಲಿಯನ್ ಟನ್ ಸಾರಜನಕ ಗೊಬ್ಬರಗಳು ಮತ್ತು ನಾಲ್ಕು ಮಿಲಿಯನ್ ಟನ್ ಫಾಸ್ಫೇಟ್ ರಸಗೊಬ್ಬರಗಳನ್ನು ಉತ್ಪಾದಿಸುತ್ತದೆ.
ಗೋಧಿ-ಗೊಬ್ಬರಗಳ ಒಪ್ಪಂದ: ಆಹಾರ ಭದ್ರತೆಗೆ ಮುಂದಾದ ಭಾರತ-ಈಜಿಪ್ಟ್
Published by Bhagya R K
01 ಸೆಪ್ಟೆಂಬರ್ 2023