* ಹಮಾಸ್ ಜತೆಗಿನ ಗಾಝಾ ಯುದ್ಧ ವಿರಾಮ ಒಪ್ಪಂದ ಪೂರ್ಣಗೊಂಡಿಲ್ಲ. ಅಂತಿಮ ವಿವರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
* ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
* ಅಮೆರಿಕ ಮತ್ತು ಕತಾರ್ ಘೋಷಿಸಿದ ಇಸ್ರೇಲ್-ಹಮಾಸ್ ಯುದ್ಧ ವಿರಾಮ ಒಪ್ಪಂದದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.
* 2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಸಮರ ಶುರುವಾಯಿತು.
* ಗಾಝಾ ಪಟ್ಟಿಯಲ್ಲಿ 46 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. 12 ಸಾವಿರ ಯೋಧರು ಈ ಸಮರದಲ್ಲಿ ಅಸುನೀಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.
* ಗಾಝಾದಲ್ಲಿ ಜನವರಿ 19ರಿಂದ ಕದನ ವಿರಾಮ ಪ್ರಾರಂಭವಾಗಲಿದ್ದು, ಪ್ರಥಮ ಹಂತದಲ್ಲಿ ಇಸ್ರೇಲ್‌ನ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಸ್ರೇಲಿ ಪಡೆಗಳು ಕೆಲವು ಪ್ರದೇಶಗಳಿಂದ ಹಿಂದೆ ಸರಿಯಲಿದ್ದು, ಫೆಲೆಸ್ತೀನೀಯರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ. ಯುದ್ಧ ಸಂತ್ರಸ್ತರಿಗೆ ಮಾನವೀಯ ನೆರವಿನ ಪ್ರಮಾಣವೂ ಹೆಚ್ಚಲಿದೆ.
ಗಾಝಾ ಕದನ ವಿರಾಮ ಇನ್ನೂ ಪೂರ್ಣಗೊಂಡಿಲ್ಲ: ಇಸ್ರೇಲ್ ಪ್ರಧಾನಿ
Published by Jyoti Angadi
17 ಜನವರಿ 2025