* ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ 'ಸ್ಪೇಸ್ ಎಕ್ಸ್' ಸಂಸ್ಥೆಯು ಬುಧವಾರ (ಜನವರಿ 15) ಅಮೆರಿಕ ಮತ್ತು ಜಪಾನ್ ಕಂಪನಿಗಳ ಎರಡು ಲ್ಯಾಂಡರ್‌ಗಳನ್ನು ಉಡಾವಣೆ ಮಾಡಿದೆ.
* ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತ ಮೂಲದ ಎರಡು ಖಾಸಗಿ ಸ್ಟಾರ್ಟಪ್ ಕಂಪನಿಗಳ ಉಪಗ್ರಹಗಳನ್ನು ಹೊತ್ತ ರಾಕೆಟ್ಅನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
* ಪಿಕ್ಸೆಲ್ ಹಾಗೂ ದಿಗಂತರಾ ಎಂಬ ಕಂಪನಿಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಪಿಕ್ಸೆಲ್ ತನ್ನದೇ ಉಪಗ್ರಹಗಳ ಗುಂಪನ್ನು ಹೊಂದಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.
* ಆರ್ಥಿಕ ಸುಧಾರಣೆಯ ಕ್ರಮವಾಗಿ ಹಣ ಉಳಿತಾಯದ ಉದ್ದೇಶದಿಂದ ಒಂದೇ ರಾಕೆಟ್‌ನಿಂದ ಏಕಕಾಲದಲ್ಲಿ ಎರಡು ಲ್ಯಾಂಡರ್‌ಗಳನ್ನು ಉಡಾವಣೆ ಮಾಡಲಾಗಿದೆ, ಆದರೆ ಅವುಗಳು ಬೇರೆ ಬೇರೆ ಸಮಯಗಳಲ್ಲಿ ಚಂದ್ರನ ಅಂಗಳವನ್ನು ತಲುಪಲಿವೆ.
* ಟೋಕಿಯೊ ಮೂಲದ ಕಂಪನಿ 'ಐ-ಸ್ಪೇಸ್' ಎರಡು ವರ್ಷಗಳ ಹಿಂದೆ ಸಹ ಚಂದ್ರನ ಅಂಗಳಕ್ಕೆ ಲ್ಯಾಂಡರ್ ಅನ್ನು ಕಳುಹಿಸಿತ್ತು.
* ಈ ಬಾರಿ ಕಳುಹಿಈ ಬಾರಿ ಕಳುಹಿಸಲಾದ ಲ್ಯಾಂಡರ್‌ನ ರೋವರ್‌ದಲ್ಲಿ ಚಂದ್ರನ ಮೇಲ್ಮೈನಲ್ಲಿನ ಮಣ್ಣು ಸಂಗ್ರಹಿಸಲು ಸಲಕರಣೆಯು ಅಳವಡಿಸಲಾಗಿದೆ. ಇದರಿಂದ ಚಂದ್ರನ ಮಣ್ಣು, ಆಹಾರ ಮತ್ತು ಜಲಮೂಲಗಳ ಬಗ್ಗೆ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.
'ಸ್ಪೇಸ್ ಎಕ್ಸ್'ನಿಂದ ಭಾರತ ಮೂಲದ ಎರಡು ಲ್ಯಾಂಡರ್ ಉಡಾವಣೆ
Published by Jyoti Angadi
17 ಜನವರಿ 2025