* ಮಾಜಿ ಪ್ರಧಾನಿ ದಿವಗಂತ ಡಾ. ಮನಮೋಹನ್ ಸಿಂಗ್ ಅವರ ಸಮಾಧಿ ನಿರ್ಮಾಣಕ್ಕಾಗಿ ಯಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಕೇಂದ್ರ ಸರ್ಕಾರ ಸ್ಥಳ ಗುರುತಿಸಿರುವುದಾಗಿ ಮೂಲಗಳು ತಿಳಿಸಿವೆ.
* ಮಾಜಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರ ಸಮಾಧಿ ಸ್ಥಳದ ಸಮೀಪವೇ ಸಿಂಗ್ ಅವರ ಸಮಾಧಿಗೂ ಕೇಂದ್ರ ಸರ್ಕಾರ ಸ್ಥಳ ಆಯ್ಕೆ ಮಾಡಿದೆ.
* ರಾಷ್ಟ್ರೀಯ ಸ್ಮೃತಿ ಸ್ಥಳವು ಯಮುನಾ ನದಿ ದಂಡೆಯ ಉದ್ದಕ್ಕೂ ಇರುವ ಪ್ರದೇಶವಾಗಿದ್ದು, ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳ ಅಂತಿಮ ವಿಧಿಗಳು ಮತ್ತು ಸ್ಮಾರಕಗಳ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ.
* ಕೇಂದ್ರ ಸರ್ಕಾರ ಗುರುತಿಸಿದ ಜಾಗಕ್ಕೆ ಸಿಂಗ್ ಕುಟುಂಬಸ್ಥರು ಒಪ್ಪಿಗೆ ನೀಡಬೇಕು. ಸಿಂಗ್ ಕುಟುಂಬಸ್ಥರು ಟ್ರಸ್ಟ್ ರಚಿಸಿ, ನಂತರ ಆ ಟ್ರಸ್ಟ್‌ಗೆ ಸಮಾಧಿ ನಿರ್ಮಾಣಕ್ಕಾಗಿ ಭೂಮಿ ಹಸ್ತಾಂತರಿಸಲಾಗುತ್ತದೆ.
* ವಸತಿ ಹಾಗೂ ನಗರ ವ್ಯವಹಾರಗಳ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಇತ್ತೀಚೆಗೆ ಸಿಂಗ್ ಕುಟುಂಬಸ್ಥರನ್ನು ಭೇಟಿಯಾಗಿ, ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ 1.5 ಎಕರೆ ಸ್ಥಳ ಗುರುತಿಸಿರುವುದಾಗಿ ಮಾಹಿತಿ ನೀಡಿದರು.
ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಮನಮೋಹನ ಸಮಾಧಿಗೆ ಸ್ಥಳ ಆಯ್ಕೆ ಮಾಡಿದ ಕೇಂದ್ರ ಸರ್ಕಾರ
Published by Jyoti Angadi
17 ಜನವರಿ 2025