➤ ಉತ್ತರ ಆಫ್ರಿಕಾದ ರಾಜಪ್ರಭುತ್ವದ ದೇಶವಾದ ಮೊರಾಕ್ಕೋ (Morocco) ರಾಜಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ದೊರೆ ಮೊಹಮ್ಮದ್ VI (King Mohammed VI) ಅವರು 50 ವರ್ಷ ವಯಸ್ಸಿನ ಫಾತಿಮಾ ಎಝಾಹ್ರಾ ಎಲ್ ಮನ್ಸೌರಿ (Fatima Ezzahra El Mansouri) ಅವರನ್ನು ಹೊಸ ಪ್ರಧಾನಮಂತ್ರಿಯಾಗಿ ನೇಮಕ ಮಾಡಿದ್ದಾರೆ.
- ಚಾರಿತ್ರಿಕ ಮೈಲಿಗಲ್ಲು: ಮೊರಾಕ್ಕೋ ದೇಶದ ಇತಿಹಾಸದಲ್ಲೇ ಪ್ರಧಾನ ಮಂತ್ರಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಫಾತಿಮಾ ಪಾತ್ರರಾಗಿದ್ದಾರೆ.
- ಅರಬ್ ಜಗತ್ತಿನಲ್ಲಿ 3ನೇ ಮಹಿಳೆ: ಟುನೀಶಿಯಾದ ನಜ್ಲಾ ಬೌಡೆನ್ (Najla Bouden) ಮತ್ತು ಸಾರಾ ಝಾಫರಾನಿ (Sara Zaafarani) ಅವರ ನಂತರ ಅರಬ್ ರಾಷ್ಟ್ರಗಳಲ್ಲಿ ಪ್ರಧಾನಿಯಾದ ಮೂರನೇ ಮಹಿಳೆ ಇವರಾಗಿದ್ದಾರೆ.
- ರಾಜಕೀಯ ಪಕ್ಷ: ಇವರು ಅಥೆಂಟಿಸಿಟಿ ಅಂಡ್ ಮಾಡರ್ನಿಟಿ ಪಾರ್ಟಿ (Authenticity and Modernity Party - PAM) ಯ ಹಿರಿಯ ನಾಯಕಿಯಾಗಿದ್ದಾರೆ.
- ಚುನಾವಣೆ ಫಲಿತಾಂಶ: ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿ PAM ಪಕ್ಷವು 395 ಸ್ಥಾನಗಳಲ್ಲಿ 97 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
➤ ಫಾತಿಮಾ ಎಝಾಹ್ರಾ ಎಲ್ ಮನ್ಸೌರಿ ಅವರ ಹಿನ್ನೆಲೆ:
- ಶಿಕ್ಷಣ: 1976 ರಲ್ಲಿ ಮರ್ರಕೇಶ್ (Marrakesh) ನಲ್ಲಿ ಜನಿಸಿದ ಇವರು ಫ್ರಾನ್ಸ್‌ನ ಮಾಂಟ್‌ಪೆಲ್ಲಿಯರ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆಂಗ್ಲೋ-ಸ್ಯಾಕ್ಸನ್ ಬ್ಯುಸಿನೆಸ್ ಕಾನೂನು ಅಧ್ಯಯನ ಮಾಡಿದ್ದಾರೆ.
- ನಗರದ ಮೇಯರ್: 2009 ರಲ್ಲಿ ಮರ್ರಕೇಶ್ ನಗರದ ಮೊದಲ ಮಹಿಳಾ ಮೇಯರ್ ಆಗಿ ಆಯ್ಕೆಯಾಗಿ ಗಮನಸೆಳೆದಿದ್ದರು.
- ಸಚಿವೆ: ಈ ಹಿಂದೆ ರಾಷ್ಟ್ರೀಯ ನಗರ ಯೋಜನೆ, ವಸತಿ ಮತ್ತು ನಗರ ನೀತಿ ಸಚಿವೆಯಾಗಿ (Minister of Housing and Urban Policy) ಸೇವೆ ಸಲ್ಲಿಸಿದ್ದಾರೆ.