➤ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪೂರೈಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರದ ಹೊಸ ವೀಸಾ ನಿಯಮವು ಸವಾಲಾಗಿ ಪರಿಣಮಿಸಿದೆ. ಅಮೆರಿಕದ ಒಳನಾಡಿನ ಭದ್ರತಾ ಇಲಾಖೆ (Department of Homeland Security - DHS) ಎಫ್-1 (F-1) ವಿದ್ಯಾರ್ಥಿ ವೀಸಾ ನಿಯಮಾವಳಿಗಳಲ್ಲಿ ಪ್ರಮುಖ ತಿದ್ದುಪಡಿಗಳನ್ನು ತಂದಿದ್ದು, ದಶಕಗಳಿಂದ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಬದಲಾಯಿಸಿದೆ.
➤ ಹೊಸ F-1 ವೀಸಾ ನೀತಿಯ ಪ್ರಮುಖ ಮುಖ್ಯಾಂಶಗಳು:
1. ಡ್ಯುರೇಷನ್ ಆಫ್ ಸ್ಟೇಟಸ್' (Duration of Status) ರದ್ದು: ಈ ಮೊದಲು ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳಿಗೆ 'ಡ್ಯುರೇಷನ್ ಆಫ್ ಸ್ಟೇಟಸ್' (D/S) ಆಧಾರದ ಮೇಲೆ ವೀಸಾ ನೀಡಲಾಗುತ್ತಿತ್ತು. ಅಂದರೆ, ಕೋರ್ಸ್ ಮುಗಿಯುವವರೆಗೆ ಅಥವಾ ಅಧ್ಯಯನ ಮುಂದುವರಿಸುವವರೆಗೆ ಅವರು ದೇಶದಲ್ಲಿ ಕಾನೂನುಬದ್ಧವಾಗಿ ಇರಲು ಅವಕಾಶವಿತ್ತು.
ಹೊಸ ನಿಯಮ: ಈಗ D/S ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದ್ದು, ವಿದ್ಯಾರ್ಥಿಗಳ ವಾಸ್ತವ್ಯದ ಅವಧಿಯನ್ನು ಗರಿಷ್ಠ ೪ ವರ್ಷಗಳಿಗೆ (4 Years) ನಿಗದಿಪಡಿಸಲಾಗಿದೆ.
ಪಿಎಚ್‌ಡಿ (Ph.D) ಅಥವಾ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳು ನಾಲ್ಕು ವರ್ಷ ಮುಗಿದ ನಂತರ ಹೆಚ್ಚುವರಿ ವಾಸ್ತವ್ಯಕ್ಕಾಗಿ ಪ್ರತ್ಯೇಕವಾಗಿ ಅರ್ಜಿ (Form I-539 Extension of Stay) ಸಲ್ಲಿಸಬೇಕಾಗುತ್ತದೆ.
2. ಗ್ರೇಸ್ ಪೀರಿಯಡ್ (Grace Period) ಕಡಿತ: ಹಿಂದಿನ ನಿಯಮ: ಶಿಕ್ಷಣ ಅಥವಾ ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (OPT) ಪೂರ್ಣಗೊಂಡ ನಂತರ ವಿದ್ಯಾರ್ಥಿಗಳಿಗೆ ಅಮೆರಿಕ ತೊರೆಯಲು ಅಥವಾ ಬೇರೆ ವೀಸಾಗೆ ಬದಲಾಯಿಸಲು 6೦ ದಿನಗಳ (60 Days) ಗ್ರೇಸ್ ಪೀರಿಯಡ್ ಸಿಗುತ್ತಿತ್ತು.
ಹೊಸ ನಿಯಮ: ಈ ಗ್ರೇಸ್ ಪೀರಿಯಡ್ ಅನ್ನು ಅರ್ಧಕ್ಕಿಳಿಸಲಾಗಿದ್ದು, ಇನ್ನು ಮುಂದೆ ಕೇವಲ ೩೦ ದಿನಗಳ (30 Days) ಸಮಯ ಮಾತ್ರ ಲಭ್ಯವಿರುತ್ತದೆ.
3. OPT ಮತ್ತು ವೀಸಾ ವಿಸ್ತರಣೆಗೆ ಪ್ರತ್ಯೇಕ ಅರ್ಜಿ: ಶಿಕ್ಷಣ ಮುಗಿದ ನಂತರ ದೊರೆಯುವ 'ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್' (OPT) ಮೂಲಕ ಉದ್ಯೋಗ ಪಡೆಯಲು ಬಯಸುವ ವಿದ್ಯಾರ್ಥಿಗಳು ಇನ್ಮುಂದೆ:
ಉದ್ಯೋಗ ಅನುಮತಿಗಾಗಿ : Form I-765
ವಾಸ್ತವ್ಯ ವಿಸ್ತರಣೆಗಾಗಿ: Form I-539— ಈ ಎರಡಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ.
➤ ಅಮೆರಿಕದಲ್ಲಿ ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿರುವ F-1 ವಿದ್ಯಾರ್ಥಿಗಳು ಮಾರ್ಚ್ 18, 2027ರ ಒಳಗಾಗಿ OPT ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ವಾಸ್ತವ್ಯ ವಿಸ್ತರಣೆ ಫಾರ್ಮ್‌ಗಳಿಂದ ವಿನಾಯಿತಿ ಸಿಗಲಿದ್ದು, ಆ ಗಡುವಿನ ನಂತರ ಹಾಗೂ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ನಿಯಮಗಳು ಕಡ್ಡಾಯವಾಗಿ ಅನ್ವಯಿಸುತ್ತವೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.