* ಎರಡು ಬಾರಿಯ ವಿಶ್ವ ಚಾಂಪಿಯನ್, ಬ್ಯಾಡ್ಮಿಂಟನ್ ಸೂಪರ್‌ಸ್ಪಾರ್ ಎನಿಸಿದ್ದ 29 ವರ್ಷದ ಜಪಾನ್‌ನ ಕೆಂಟೊ ಮೊಮೊಟಾ ಅವರು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮೇ 2 ರಂದು ನಿವೃತ್ತಿ ಘೋಷಿಸಿದ್ದಾರೆ.
* ಚೀನಾದ ಚೆಂಗ್ಡುವಿನಲ್ಲಿ ನಡೆದ ಥಾಮಸ್ ಮತ್ತು ಉಬರ್ ಕಪ್ ಫೈನಲ್‌ಗಳನ್ನು ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅವರ ಅಂತಿಮ ಪಂದ್ಯಾವಳಿ ಎಂದು ಗುರುತಿಸಲಾಗಿದೆ.
* ಮೊಮೊಟಾ ಅವರು 2018 ರಲ್ಲಿ ಚೀನಾದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಜಪಾನೀಸ್ ವ್ಯಕ್ತಿಯಾಗಿದ್ದಾರೆ ಮತ್ತು 2019ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ತಮ್ಮ ಕಿರೀಟವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು.
* ಬ್ಯಾಡ್ಮಿಂಟನ್ ಸೂಪರ್‌ಸ್ಪಾರ್ ಎನಿಸಿದ್ದ 29 ವರ್ಷದ ಕೆಂಟೊ 2019ರಲ್ಲಿ 11 ಪ್ರಶಸ್ತಿಗಳನ್ನು ಗೆದ್ದಿದ್ದರು. 2019ರಲ್ಲಿ ಆಡಿದ 73 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಮಾತ್ರ ಸೋತಿದ್ದರು.
* ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳಾದ ನಂತರ ಮತ್ತೆ ಅವರು ಆಡಲು ಸಾಧ್ಯವಾಗಲಿಲ್ಲ. 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಬಯಕೆ ಹೊಂದಿದ್ದರು. ಆದರೆ ಅವರ ಕ್ರಮಾಂಕ ಅರ್ಹತಾಮಟ್ಟಕ್ಕಿಂತ ಕೆಳಗಿದ್ದ ಕಾರಣ ಅವಕಾಶ ಸಿಗಲಿಲ್ಲ.
ಎರಡು ಬಾರಿಯ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ನಿಂದ ನಿವೃತ್ತಿ ಘೋಷಿಸಿದ್ದಾರೆ
Published by Yallamma G
03 ಮೇ 2024