* ಇತ್ತೀಚಿಗೆ ಐಪಿಎಲ್ ಗೆ ವಿದಾಯ ಹೇಳಿದ್ದ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
* ಕಳೆದ ಕೆಲವು ದಿನಗಳಲ್ಲಿ ಪಡೆದ ಪ್ರೀತಿ, ಬೆಂಬಲ ಮತ್ತು ಪ್ರೀತಿಯಿಂದ ಮಿಂದಿದ್ದೇನೆ. ಈ ಭಾವನೆಯನ್ನು ಸಾಧ್ಯವಾಗಿಸಿದ ಎಲ್ಲಾ ಅಭಿಮಾನಿಗಳಿಗೆ ತುಂಬಾ ಹೃದಯದ ಕೃತಜ್ಞತೆ ಮತ್ತು ಧನ್ಯವಾದಗಳು. ಸಾಕಷ್ಟು ಯೋಚಿಸಿದ ನಂತರ, ನಾನು ಪ್ರತಿನಿಧಿಸಿದ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ಅಧಿಕೃತವಾಗಿ ನಾನು ನಿವೃತ್ತಿಯನ್ನು ಘೋಷಿಸಿದ್ದೇನೆ. ಮುಂದಿನ ದಿನಗಳ ಎದುರಾಗುವ ಸವಾಲುಗಳನ್ನು ಎದುರಿಸಲು ನಾನು ಸಜ್ಜಾಗುತ್ತಿದ್ದೇನೆ," ಎಂದು ದಿನೇಶ್‌ ಕಾರ್ತಿಕ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
* 26 ಟೆಸ್ಟ್, 94 ಏಕದಿನ ಹಾಗೂ 60 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರು ಮಾದರಿಗಳಿಂದ 180 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಏಕೈಕ ಟೆಸ್ಟ್ ಶತಕ ಮತ್ತು 17 ಅರ್ಧಶತಕಗಳೊಂದಿಗೆ 3463 ರನ್ ಗಳಿಸಿದ್ದಾರೆ. 91 ಸ್ಪಂಪಿಂಗ್ ಮಾಡಿದ್ದಾರೆ.
* 2004ರಲ್ಲಿ ಅವರು ಲಾರ್ಡ್ಸ್‌ ನಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ತಂಡದ ನಾಯಕ ಮೈಕೆಲ್ ವಾನ್ ಅವರನ್ನು ಮಿಂಚಿನ ಸ್ಟಾಂಪಿಂಗ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡಿದ್ದರು.