* ಮಲಯಾಳ ಮನೋರಮಾ ಮುಖ್ಯ ಸಹ ಸಂಪಾದಕ, ಮತ್ತು ನಿರ್ದೇಶಕರಾದ ರಿಯಾದ್
ಮ್ಯಾಥಿಯೋ ಅವರು ಉಪಾಧ್ಯಕ್ಷರಾಗಿದ್ದಾರೆ ಬೆನಟ್, ಕೋಲ್‌ಮನ್ ಅಂಡ್ ಕಂಪನಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೋಹಿತ್ ಜೈನ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
* ಶ್ರೀನಿವಾಸನ್ ಅವರು ಪ್ರಸ್ತುತ ಏಷ್ಯನ್ ಫೆಡರೇಷನ್ ಆಫ್ ಅಡ್ವಟೈಸಿಂಗ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಟನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್‌ನ, ಭಾರತ ಚಾಪ್ಟರ್, ಕಾನಿಫೈಡರೇಷನ್ ಆಫ್ ಏಷ್ಯನ್ ಅಡ್ವರ್ಟೈಸಿಂಗ್ ಏಜೆ ಆಸೋಸಿಯೇಷನ, ಅಡ್ವರ್ಟೈಸಿಂಗ್ ಏಜೆನ್ಸಿಸ್ ಅಸೋಸಿಯೇಷನ ಆಫ್ ಇಂಡಿಯಾ, ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.* ಮೀಡಿಯಾ ಆಂಡ್ ಒಒಎಚ್ ಆಫ್ ಮ್ಯಾಡಿಸನ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಪಾಲುದಾರರಾದ ಸುಖುಜಾ ಅವರು ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮಸಾನಿ ಅವರು ತಿಳಿಸಿದ್ದಾರೆ.