* ಇತ್ತೀಚಿಗೆ ಯುಎಇ ದೇಶದ ದುಬೈ ನಲ್ಲಿ ಮುಕ್ತಾಯಗೊಂಡ 5 ನೇ ಆವೃತ್ತಿಯ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ ನ್ಯಾಷನಲ್-2023 ರ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ " ಮಾನ್ಸಿ ಜೋಷಿ ಮತ್ತು ತುಳಸಿಮತಿ ಮುರುಗೇಶನ್ " ಅವರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
* ಐದನೇ ಆವೃತ್ತಿಯ ಫಝಾ ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್-2023ರಲ್ಲಿ ಮಾನಸಿ ಜೋಶಿ ಮತ್ತು ತುಳಸಿಮತಿ ಮುರುಗೇಶನ್ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
* ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್‌ನಲ್ಲಿ ಎರಡನೇ ರ್‍ಯಾಂಕಿನಲ್ಲಿರುವ ಮಾನಸಿ ಹಾಗೂ ಮುರುಗೇಶನ್ ಮಹಿಳೆಯರ ಡಬಲ್ಸ್ ಎಸ್‌ಎಲ್3-ಎಸ್‌ಯು5 ವಿಭಾಗದಲ್ಲಿ ಇಂಡೋನೇಶ್ಯದ ಲೀಯಾ ರಾಟ್ರಿ ಒಕ್ಟಿಲಾ ಮತ್ತು ಖಲಿಮತಸ್ ಸಾದಿಯಾ ಅವರನ್ನು 15-21, 21-14 ಹಾಗೂ 21-6 ಅಂತರದಿಂದ ಮಣಿಸಿ ಚಿನ್ನ ಗಳಿಸಿದರು.
* ಟೀಮ್ ಇಂಡಿಯಾವು ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದೆ. ಮಿಕ್ಸೆಡ್ ಡಬಲ್ಸ್ ಎಸ್‌ಎಲ್3 ಹಾಗೂ ಎಸ್‌ಯು5ನಲ್ಲಿ ಕುಮಾರ ನಿತೇಶ್ ಹಾಗೂ ತುಳಸಿಮತಿ ಮುರುಗೇಶನ್ ಅವರು ಕಂಚು ಗಳಿಸಿದರು.
ಬುಧವಾರ, 20 ಡಿಸೆಂಬರ್ 2023
10:12 ಪೂರ್ವಾಹ್ನ
Daily PDF
ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ 2023 : ಮಾನಸಿ-ಮುರುಗೇಶನ್ಗೆ ಚಿನ್ನದ ಪದಕ
Authored by:
Bhagya R K