➤ ಹೊಸದಿಲ್ಲಿಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ನೀತಿ ನಿರೂಪಣೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಒತ್ತು ನೀಡುವ ಸಲುವಾಗಿ ಕೇಂದ್ರ ಸರ್ಕಾರದ ‘ನೀತಿ ಆಯೋಗ’ (NITI Aayog) ಮಾದರಿಯಲ್ಲಿ ‘ದೆಹಲಿ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ಫರ್ಮೇಷನ್ ಅಂಡ್ ಇನೋವೇಶನ್’ (DITI - Delhi Institute for Transformation and Innovation) ಅನ್ನು ಅಧಿಕೃತವಾಗಿ ಅಧಿಸೂಚಿಸಲಾಗಿದೆ.
➤ 'ವಿಕಸಿತ ದೆಹಲಿ 2047' (Viksit Dilli by 2047) ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನೂತನ ಸಂಸ್ಥೆಯು ದೆಹಲಿ ಸರ್ಕಾರದ ಅತ್ಯುನ್ನತ ಸಾರ್ವಜನಿಕ ನೀತಿ ಹಾಗೂ ಶಿಕ್ಷಣ ಸಲಹಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
➤ ಹಳೆಯ ಸಂಸ್ಥೆಯ ಬದಲಾವಣೆ: ಈ ಹಿಂದೆ ಆಪ್ (AAP) ಸರ್ಕಾರದ ಅವಧಿಯಲ್ಲಿ ನೀತಿ ನಿರೂಪಣೆಗೆ ಸಲಹೆ ನೀಡುತ್ತಿದ್ದ ಸಂವಾದ ಮತ್ತು ಅಭಿವೃದ್ಧಿ ಆಯೋಗ (DDC - Dialogue and Development Commission) ಸ್ಥಾನದಲ್ಲಿ ಈಗ 'DITI' ಅಸ್ತಿತ್ವಕ್ಕೆ ಬಂದಿದೆ.
➤ ಸಂಸ್ಥೆಯ ರಚನೆ ಮತ್ತು ಆಡಳಿತ ಮಂಡಳಿ (Governing Board):
- ಅಧ್ಯಕ್ಷರು: ಮುಖ್ಯಮಂತ್ರಿಯವರಿಂದ ನಾಮನಿರ್ದೇಶನಗೊಳ್ಳುವ ವ್ಯಕ್ತಿ ಇದರ ಅಧ್ಯಕ್ಷರಾಗಿರುತ್ತಾರೆ.
- ಸದಸ್ಯರು: ದೆಹಲಿ ಸರ್ಕಾರದ ಎಲ್ಲಾ ಸಚಿವರು, ಮುಖ್ಯ ಕಾರ್ಯದರ್ಶಿ (Chief Secretary), ದೆಹಲಿ ಅಭಿವೃದ್ಧಿ ಪ್ರಾಧಿಕಾರದ (DDA) ಉಪಾಧ್ಯಕ್ಷರು, ಎಂಸಿಡಿ (MCD) ಆಯುಕ್ತರು ಮತ್ತು ಎನ್ಡಿಎಂಸಿ (NDMC) ಅಧ್ಯಕ್ಷರು ಈ ಮಂಡಳಿಯ ಸದಸ್ಯರಾಗಿರುತ್ತಾರೆ.
- ಸದಸ್ಯ ಕಾರ್ಯದರ್ಶಿ: ಯೋಜನಾ ಇಲಾಖೆಯ (Planning Department) ಆಡಳಿತಾತ್ಮಕ ಕಾರ್ಯದರ್ಶಿಯು ಇದರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
➤ ಕಾರ್ಯನಿರ್ವಾಹಕ ಸಮಿತಿ (Executive Committee): ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚನೆಯಾಗಲಿರುವ ಈ ಸಮಿತಿಯು ಅಭಿವೃದ್ಧಿ ಕಾರ್ಯತಂತ್ರಗಳು, ಸಾಮಾಜಿಕ-ಆರ್ಥಿಕ ಗುರಿಗಳು ಮತ್ತು 'ವಿಶನ್ ದೆಹಲಿ 2047' ರೋಡ್ಮ್ಯಾಪ್ ಅನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಪ್ರತಿನಿಧಿಯೂ ಸೇರಿದಂತೆ ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಇರಲಿದ್ದಾರೆ.
➤ DITI ಸಂಸ್ಥೆಯ ಪ್ರಮುಖ ಜವಾಬ್ದಾರಿಗಳು:
- ದೀರ್ಘಕಾಲೀನ ನೀತಿ ನಿರೂಪಣೆ: ಶಿಕ್ಷಣ ನೀತಿ, ಅಭಿವೃದ್ಧಿ ಕಾರ್ಯತಂತ್ರಗಳು ಮತ್ತು ಸಾಂಸ್ಥಿಕ ಸುಧಾರಣೆಗಳ ಕುರಿತು ಸರ್ಕಾರಕ್ಕೆ ತಜ್ಞರ ಸಲಹೆಗಳನ್ನು ನೀಡುವುದು.
- ವಿಶನ್ ದೆಹಲಿ 2047: ದೆಹಲಿಯನ್ನು ಮುಂಬರುವ ದಿನಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಮಧ್ಯಮ ಹಾಗೂ ದೀರ್ಘಕಾಲೀನ ಚೌಕಟ್ಟುಗಳನ್ನು ರೂಪಿಸುವುದು.
- ಕಾರ್ಯಕ್ರಮಗಳ ಮೌಲ್ಯಮಾಪನ: ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸುವುದು, ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ವೇಗಗೊಳಿಸುವುದು.
- ಸಹಭಾಗಿತ್ವ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಥಿಂಕ್ ಟ್ಯಾಂಕ್ಗಳು, ಶಿಕ್ಷಣ ಸಂಸ್ಥೆಗಳು ಮತ್ತು ನೀತಿ ಸಂಶೋಧನಾ ಸಂಘಟನೆಗಳೊಂದಿಗೆ ಒಪ್ಪಂದ ಹಾಗೂ ಸಹಕಾರವನ್ನು ಉತ್ತೇಜಿಸುವುದು.
ದೆಹಲಿ ಸರ್ಕಾರದ ನೂತನ ಥಿಂಕ್ ಟ್ಯಾಂಕ್: ‘DITI’ (ದೃಷ್ಠಿ ಮತ್ತು ನೀತಿ ಸಲಹಾ ಸಂಸ್ಥೆ) ಅಧಿಸೂಚನೆ ಬಿಡುಗಡೆ!
Published by Akshata Halli
3 hours ago