➤ ಭಾರತವು ಅಕ್ಟೋಬರ್ 26 ರಿಂದ 28, 2026 ರವರೆಗೆ ಹೊಸ ದೆಹಲಿಯಲ್ಲಿ 61ನೇ ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಮಿತಿ (CIML) ಸಭೆಯನ್ನು ಆಯೋಜಿಸುತ್ತಿದೆ. ಜಾಗತಿಕ ಅಳತೆ ಮಾನದಂಡಗಳು (Measurement Standards), ನ್ಯಾಯಯುತ ವ್ಯಾಪಾರ (Fair Trade) ಮತ್ತು ಗ್ರಾಹಕ ರಕ್ಷಣೆ ಕುರಿತು ಚರ್ಚಿಸಲು ಪ್ರಪಂಚದಾದ್ಯಂತದ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಹಾಗೂ ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
➤ ಈ ಮೂರು ದಿನಗಳ ಪ್ರಮುಖ ಸಮ್ಮೇಳನದಲ್ಲಿ ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಜಪಾನ್, ಚೀನಾ, ಆಸ್ಟ್ರೇಲಿಯಾ, ಅಮೆರಿಕ, ಬ್ರೆಜಿಲ್ ಮುಂತಾದ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
➤ ಸಭೆಯ ಪ್ರಮುಖ ಮುಖ್ಯಾಂಶಗಳು ಮತ್ತು ಕಾರ್ಯಕ್ರಮಗಳು:
1. "ಕಾನೂನು ಮಾಪನಶಾಸ್ತ್ರದಲ್ಲಿ ವಿಕಾಸಗಳು" (Evolutions in Legal Metrology) ಅಂತಾರಾಷ್ಟ್ರೀಯ ಸೆಮಿನಾರ್: ಅಕ್ಟೋಬರ್ 26 ರಂದು ನಡೆಯುವ ಈ ಸಮಾವೇಶದಲ್ಲಿ ನಿಯಂತ್ರಕ ಸೇವೆಗಳ ಡಿಜಿಟಲೀಕರಣ, ಅಳತೆ ಸಾಧನಗಳ ಅಂತರರಾಷ್ಟ್ರೀಯ ಮಾನ್ಯತೆ ಮತ್ತು ನಾವೀನ್ಯತೆ ಆಡಳಿತದ ಬಗ್ಗೆ ಚರ್ಚಿಸಲಾಗುವುದು.
2. OIML ಕಾರ್ಯತಂತ್ರದ ಕಾರ್ಯಾಗಾರ (Strategy Workshop): ಅಕ್ಟೋಬರ್ 27 ರಂದು ನಡೆಯುವ ಈ ಕಾರ್ಯಾಗಾರದಲ್ಲಿ ಮುಂಬರುವ ತಾಂತ್ರಿಕ ಸವಾಲುಗಳು ಮತ್ತು ಸಂಸ್ಥೆಯ ಭವಿಷ್ಯದ ಆದ್ಯತೆಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
3. ಪ್ರಮುಖ ಚರ್ಚೆಗಳು: ಅಂತರರಾಷ್ಟ್ರೀಯ ಶಿಫಾರಸುಗಳ ಅಭಿವೃದ್ಧಿ, OIML ಪ್ರಮಾಣೀಕರಣ ವ್ಯವಸ್ಥೆ (OIML-CS) ಮತ್ತು ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿದ ತಾಂತ್ರಿಕ ಚಟುವಟಿಕೆಗಳು ಇಲ್ಲಿ ಚರ್ಚೆಗೆ ಬರಲಿವೆ.
➤ ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ (OIML) ಕುರಿತು:
- ಸ್ಥಾಪನೆ: 1955.
- ಸ್ವರೂಪ: ಇದು ಒಂದು ಅಂತರರಾಷ್ಟ್ರೀಯ ಸರ್ಕಾರಿ ಸಂಸ್ಥೆಯಾಗಿದ್ದು (Intergovernmental Organisation), ಜಾಗತಿಕವಾಗಿ ಕಾನೂನು ಮಾಪನಶಾಸ್ತ್ರದ ಕಾರ್ಯವಿಧಾನಗಳನ್ನು ಏಕರೂಪಗೊಳಿಸಲು (Harmonisation) ಶ್ರಮಿಸುತ್ತದೆ.
- ಉದ್ದೇಶ: ವ್ಯಾಪಾರ, ಉದ್ಯಮ, ಆರೋಗ್ಯ ರಕ್ಷಣೆ, ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಬಳಸುವ ಅಳತೆ ಸಾಧನಗಳಿಗೆ ಜಾಗತಿಕ ಮಾನದಂಡಗಳನ್ನು ರೂಪಿಸುವುದು.
- CIML ಪಾತ್ರ: ಇದು OIML ನ ಪ್ರಮುಖ ನಿರ್ಧಾರಕ ಮಂಡಳಿಯಾಗಿದೆ (Principal Decision-Making Body).