* ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಭೋಪಾಲ್ ಅನಿಲ ದುರಂತದಲ್ಲಿ ಕಳೆದುಹೋದ ಅಮೂಲ್ಯ ಜೀವಗಳನ್ನು ಸ್ಮರಿಸಲು ಈ ದಿನವನ್ನು ಗುರುತಿಸಲಾಗಿದೆ.
* 2, 1984 ರಂದು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ (UCIL) ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಅಂದಿನಿಂದ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.
* ಜಲ, ವಾಯು, ಶಬ್ದಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಮಾಲಿನ್ಯ ದಿನವನ್ನು ಆಚರಿಸಲಾಗುತ್ತದೆ.
* ಜಗತ್ತು ದಿನದಿಂದ ಬೆಳೆಯುತ್ತಿರುವುದರಿಂದಾಗಿ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಇದು ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ. ಇನ್ನು ಕೀಟ ನಿಯಂತ್ರಕ ಔಷಧಗಳು, ಬೆಳೆ ತ್ಯಾಜ್ಯಗಳನ್ನು ಸುಡುವುದು, ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿಮೀರುತ್ತಿರುವುದು, ಕೈಗಾರಿಕೆಗಳು ಹೊರಸೂಸುತ್ತಿರುವ ಅಪಯಾಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ. ಸರ್ಕಾರಗಳು ವಾಯು ಮಾಲಿನ್ಯ ತಡೆಯಲು ಎಷ್ಟೇ ಕ್ರಮಗಳನ್ನು ಕೈಗೊಂಡರು ವಾಯು ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಶನಿವಾರ, 02 ಡಿಸೆಂಬರ್ 2023
10:41 ಪೂರ್ವಾಹ್ನ
Daily PDF
ಡಿಸೆಂಬರ್ 2 : ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
Authored by:
Yallamma G