* ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ನ (ಪಿ ಕೆ ಎಲ್) 10 ನೇ ಆವೃತ್ತಿಯು ಅಹಮದಾಬಾದ್ ನ ಸಬರಮತಿ ನದಿಯಲ್ಲಿ ಅಕ್ಷರ್ ರಿವರ್ ಕ್ರೂಸ್ ನಲ್ಲಿ ಡಿಸೆಂಬರ್ 01 ರಂದು ಟೂರ್ನಿ ಗೆ ಚಾಲನೆ ನೀಡಲಾಗಿದ್ದು, ಪ್ರೊ ಕಬಡ್ಡಿ 10 ನೇ ಆವೃತ್ತಿಯ ಪಂದ್ಯಗಳು ಡಿಸೆಂಬರ್ 02 ರಂದು ನಡೆಯಲಿವೆ.
* ಭಾರತದಲ್ಲಿ, 2014 ರಲ್ಲಿ ಪ್ರಾರಂಭವಾದ ಪ್ರೋ ಕಬಡ್ಡಿ ಲೀಗ್, ಭಾರತದಲ್ಲಿ ಐಪಿ ಎಲ್ ಬಳಿಕ ಎರಡನೇ ಕ್ರೀಡಾ ಲೀಗ್ ಆಗಿದೆ. ಈ ಬಾರಿಯೂ 12 ತಂಡಗಳು ಚಾಂಪಿಯನ್ ಕಿರೀಟಕ್ಕಾಗಿ ಪೈಪೋಟಿ ನಡೆಸಲಿವೆ.
* ಈ ಬಾರಿ ಎಲ್ಲ ಫ್ರಾಂಚೈಸ್‌ಗಳ ತವರು ನೆಲದಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಮೊದಲ ಲೆಗ್ ಪಂದ್ಯಗಳು ಅಹಮದಾಬಾದ್‌ನಲ್ಲಿ ಡಿ.2 ರಿಂದ 7ರವರೆಗೆ. ಎರಡನೇ ಲೆಗ್‌ನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.8 ರಿಂದ 13ರ ವರೆಗೆ ಆಯೋಜನೆಯಾಗಿವೆ. ನಂತರ ಕ್ರಮವಾಗಿ ಪುಣೆ (ಡಿ.15-20). ಚೆನ್ನೈ (ಡಿಸೆಂಬರ್ 22-27). ನೋಯ್ಡಾ (ಡಿ.29- ಜನೆವರಿ.3. 2024), ಮುಂಬೈ (ಜನೆವರಿ.5-10). ಜೈಪುರ (ಜ.12-17), ಹೈದರಾಬಾದ್ (ಜನೆವರಿ19-24). ಪಾಟ್ನಾದಲ್ಲಿ (ಜನೆವರಿ.26-31), ದೆಹಲಿ (ಫೆಬ್ರುವರಿ 2-7) ಕೋಲ್ಕತ್ತಾ (ಫೆಬ್ರುವರಿ.9- 14)ಪಂಚಕುಲದಲ್ಲಿ (ಫೆ.16-21) ಲೀಗ್ ಹಂತದ ಪಂದ್ಯಗಳು ನಡೆಯಲಿವೆ.
* 10 ನೇ ಆವೃತ್ತಿಯಲ್ಲಿ ಭಾಗವಹಿಸುವ 12 ತಂಡಗಳು
ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ, ಯುಪಿ ಯೋಧಾ.
* ಪ್ರೊ ಕಬಡ್ಡಿ ಲೀಗ್ ವಿಜೇತ ತಂಡಗಳು
1. ಜೈಪುರ್ ಪಿಂಕ್ ಪ್ಯಾಂಥರ್ಸ್
2. ಯು ಮುಂಬಾ
3. ಪಾಟ್ನಾ ಪೈರೆಟ್ಸ್
4. ಪಾಟ್ನಾ ಪೈರೆಟ್ಸ್
5. ಪಾಟ್ನಾ ಪೈರೆಟ್ಸ್
6. ಬೆಂಗಳೂರು ಬುಲ್ಸ್
7. ಬಂಗಾಳ ವಾರಿಯರ್ಸ್
8. ದಬಾಂಗ್‌ಡೆಲ್ಲಿ
9. ಜೈಪುರ್ ಪಿಂಕ್ ಪ್ಯಾಂಥರ್ಸ್
ಡಿಸೆಂಬರ್ 02 ರಿಂದ ಪ್ರೊ.ಕಬಡ್ಡಿ : 10 ನೇ ಆವೃತ್ತಿ ಆರಂಭ
Published by Yallamma G
02 ಡಿಸೆಂಬರ್ 2023