* ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ಗೆಲುವು ಹಾಗೂ ಬಾಂಗ್ಲಾದೇಶದ ವಿಮೋಚನೆಯನ್ನು 'ವಿಜಯ ದಿವಸ್' ಎಂದು ಆಚರಿಸಲಾಗುತ್ತದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ವಿಜಯದ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 16 ರಂದು 'ವಿಜಯ ದಿವಸ್' ಅನ್ನು ಆಚರಿಸಲಾಗುತ್ತದೆ.
* 1971ರ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವಾಗಿತ್ತು. 13 ದಿನಗಳ ಹೋರಾಟದ ನಂತರ ಭಾರತ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿತು. ಪಾಕಿಸ್ತಾನಿ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು 93 ಸಾವಿರ ಪಾಕಿಸ್ತಾನಿ ಸೈನಿಕರೊಂದಿಗೆ ಭಾರತೀಯ ಸೇನೆ ಮತ್ತು ಬಾಂಗ್ಲಾ ಪಡೆಗಳಿಗೆ ಶರಣಾದರು.
* ಶರಣಾಗತಿಯ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಪಾಕಿಸ್ತಾನವನ್ನು ಪ್ರತಿನಿಧಿಸಿದರೆ, ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಆರೋರಾ ಭಾರತವನ್ನು ಪ್ರತಿನಿಧಿಸಿದ್ದರು. ಈ ಶರಣಾಗತಿ ಭಾರತಕ್ಕೆ ಐತಿಹಾಸಿಕ ಗೆಲುವು ನೀಡಿ ಹೊಸ ರಾಷ್ಟ್ರದ ಉದಯಕ್ಕೆ ನಾಂದಿ ಹಾಡಿತು.
ಶನಿವಾರ, 16 ಡಿಸೆಂಬರ್ 2023
5:25 ಅಪರಾಹ್ನ
Daily PDF
ಡಿಸೆಂಬರ್ 16 : ವಿಜಯ ದಿವಸ
Authored by:
Bhagya R K