* ಡೆನ್ಮಾರ್ಕ್ ನ ರಾಣಿ ಮಾರ್ಗರೇಟ್ ಅಧಿಕಾರ ತ್ಯೆಜಿಸಿದ್ದು ಅವರ ಪುತ್ರ ಫೆಡ್ರಿಕ್ 10ನೇ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
* ಕ್ರಿಸ್ತಿಯಾನ್‌ಬರ್ಗ್ ಆರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇಶ್, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕಿದರು. ಈ ಮೂಲಕ 52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗ ಅಂತ್ಯವಾದರೆ, ರಾಜನಾಗಿ ಅವರ 55 ವರ್ಷ ವಯಸ್ಸಿನ ಅವರ ಪುತ್ರ ಫೆಡ್ರಿಕ್ ಅವರ ಅಧಿಕಾರವಧಿ ಆರಂಭಗೊಂಡಿತು.
* ರಾಜ ಫೆಡ್ರಿಕ್, ಅವರ ಪತ್ನಿ, ಅವರ 18 ವರ್ಷದ ಪುತ್ರನಾದ ನೂತನ ರಾಜಕುಮಾರ ಈ ಸಂದರ್ಭದಲ್ಲಿ ಇದ್ದರು. 'ರಾಜನಿಗೆ ದೇವರು ಒಳ್ಳೆಯದು ಮಾಡಲಿ' ಎಂಬ ಹಾರೈಕೆ ಹಾಗೂ ಆನಂದಭಾಷ್ಪದೊಂದಿಗೆ ರಾಣಿ ನಿರ್ಗಮಿಸಿದರು.
ಮಂಗಳವಾರ, 16 ಜನವರಿ 2024
4:16 ಅಪರಾಹ್ನ
Daily PDF
ಡೆನ್ಮಾರ್ಕ್ ನ 10ನೇ ರಾಜನಾಗಿ ಫೆಡ್ರಿಕ್ ಅಧಿಕಾರ ಸ್ವೀಕಾರ
Authored by:
Yallamma G