“ಮೆಡಿಕಾಬ್” : ಐಐಟಿ ಮದ್ರಾಸ್ ನಿಂದ ಸಂಚಾರಿ ಆಸ್ಪತ್ರೆ ಅಭಿವೃದ್ಧಿ
Published by Basavaraj Halli
20 ಜುಲೈ 2020
IIT-ಮದ್ರಾಸ್ ಸಹಭಾಗಿತ್ವದ ಸ್ಟಾರ್ಟ್ ಅಪ್ ಸಂಸ್ಥೆಯಾದ "ಮಾಡ್ಯುಲಸ್ ಹೌಸಿಂಗ್" ಸಂಸ್ಥೆಯು ಸಂಚಾರಿ ಆಸ್ಪತ್ರೆ ಘಟಕವನ್ನು ಅಭಿವೃದ್ಧಿಪಡಿಸಿದೆ. ಘಟಕವನ್ನು ಎಲ್ಲಿಯಾದರೂ ಸಾಗಿಸಬಹುದು ಮತ್ತು ಕೇವಲ 2 ಗಂಟೆಗಳಲ್ಲಿ ಸ್ಥಾಪಿಸಬಹುದು.
* ಈ ಸಂಚಾರಿ ಆಸ್ಪತ್ರೆಗೆ ಸಂಚಾರಿ ಆಸ್ಪತ್ರೆಗೆ “ಮೆಡಿಕಾಬ್” ಎಂದು ಹೆಸರಿಸಲಾಗಿದೆ.
* ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಚಾರಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಘಟಕಗಳನ್ನು ನಿಯೋಜಿಸಲಾಗುತ್ತಿದೆ.
* ಭಾರತದಲ್ಲಿ 1000 ವ್ಯಕ್ತಿಗಳಿಗೆ 0.7 ಹಾಸಿಗೆಗಳ ಲಭ್ಯವಿದ್ದು, ಮೆಡಿಕಾಬ್ನಂತಹ ಆವಿಷ್ಕಾರಗಳು ಭಾರತದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಹಾಯವಾಗಲಿವೆ.