ಮಿಜೋರಾಂನಲ್ಲಿ ಮೊದಲ ಮೆಗಾ ಫುಡ್ ಪಾರ್ಕ್ ಉದ್ಘಾಟನೆ
Published by Basavaraj Halli
20 ಜುಲೈ 2020
ಆಹಾರ ಸಂಸ್ಕರಣಾ ಉದ್ಯಮ ಸಚಿವರಾದ ಹರ್ಸಿಮ್ರತ್ ಕೌರ್ ಬಾದಲ್ ಮಿಜೋರಾಂನ ಮೊದಲ ಮೆಗಾ ಫುಡ್ ಪಾರ್ಕ್ ಅನ್ನು ಉದ್ಘಾಟಿಸಿದರು. ಮಿಜೋರಾಂನಲ್ಲಿ ಉದ್ಘಾಟಿಸಲಾದ ಮಿಝೋರಾಂ ಫುಡ್ ಪಾರ್ಕ್ (ಸರ್ಕಾರೇತರ) ಆರಂಭದಿಂದಾಗಿ 5,000 ಜನರಿಗೆ ಉದ್ಯೋಗ ದೊರೆಯುವುದಲ್ಲದೆ, ಪ್ರಾಥಮಿಕ ಸಂಸ್ಕರಣಾ ಕೇಂದ್ರ ಮತ್ತು ಕೋರ್ ಸಂಸ್ಕರಣಾ ಕೇಂದ್ರದಿಂದಾಗಿ ಸುಮಾರು 25 ಸಾವಿರ ರೈತರಿಗೆ ಅನುಕೂಲವಾಗಲಿದೆ.
* ಮಿಝೋರಾಂ ಫುಡ್ ಪಾರ್ಕ್ ಅನ್ನು ಭಾರತ ಸರ್ಕಾರದ ಮೆಗಾ ಫುಡ್ ಪಾರ್ಕ್ ಯೋಜನೆಯಡಿ ಸ್ಥಾಪಿಸಲಾಗಿದೆ.