2023ರ ವೇಳೆ ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಮತ್ತು 2027ಕ್ಕೆ ಪೂರ್ಣ ಯೋಜನೆ ಜಾರಿ: ರೈಲ್ವೆ ಇಲಾಖೆ
Published by Basavaraj Halli
20 ಜುಲೈ 2020
ನವದೆಹಲಿ: ಭಾರತದಲ್ಲಿ ಮೊದಲ ಖಾಸಗಿ ರೈಲು 2023ಕ್ಕೆ ತನ್ನ ಸಂಚಾರ ಆರಂಭಿಸಲಿದ್ದು, ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರ ವೇಳೆಗೆ ಪರಿಚಯಿಸಲಾಗುವುದೆಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್ಲೈನ್ ಅನುಸಾರ ಈ ರೈಲುಗಳ ಸಂಚಾರ ಆರಂಬಿಸಲಾಗುವದು. ಅಲ್ಲದೆ 2027 ರ ವೇಳೆಗೆ ಯೋಜನೆಯ ಎಲ್ಲಾ 151 ಖಾಸಗಿ ರೈಲುಗಳು ಹಳಿ ಮೇಲೆ ಸಂಚರಿಸಲಿದೆ ಎಂದು ತಿಳಿದುಬಂದಿದೆ.
ಖಾಸಗಿ ರೈಲುಗಳ ಯೋಜನೆಯ ಭಾಗವಾಗಿ ಸಂಚರಿಸಲು ಉದ್ದೇಶಿಸಿರುವ ವಿವರ:
2022-23ರಲ್ಲಿ 12,
2023-2024ರಲ್ಲಿ 45,
2025-26ರಲ್ಲಿ 50 ಮತ್ತು ಅಂತಿಮವಾಗಿ
2026-2027ರಲ್ಲಿ 151 ರೈಲುಗಳು ಹಳಿ ಮೇಲೆ ಸಂಚಾರ ನಡೆಸಲಿದೆ.