ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಬಾರ್ಡ್ 44 ಲಕ್ಷ ರೂ ಮೊತ್ತದ ಯೋಜನೆ ಜಾರಿ
Published by Basavaraj Halli
18 ಜುಲೈ 2020
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 44 ಲಕ್ಷ ರೂ ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಿದೆ.
* ಸ್ವಸಹಾಯ ಗುಂಪುಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾಂತ್ಯದಲ್ಲಿನ ಸ್ವ-ಸಹಾಯ ಗುಂಪುಗಳ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡಲು NABARD ಈ ಯೋಜನೆಗಳನ್ನು ಆರಂಭಿಸಿದೆ.
* ಸುಮಾರು 385 ಗ್ರಾಮ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಹೊಸದಾಗಿ ರೂಪುಗೊಂಡ ಸ್ವಸಹಾಯ ಸಂಘಗಳ ಮುಖಂಡರಿಗೆ ತರಬೇತಿ ನೀಡಲು 10 ಲಕ್ಷ ರೂ ಮೀಸಲಿರಿಸಲಾಗಿದೆ.
* ಯೋಜನೆಯಡಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಅಣಬೆ ಕೃಷಿ ಮತ್ತು ಬಿದಿರಿನ ಕರಕುಶಲ ಕಲೆಗಳಿಗೆ ತರಬೇತಿ ನೀಡಲಾಗುವುದು.