ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ನ ಜಿಯೋ ಫ್ಲಾಟ್​ಫಾರಂನಲ್ಲಿ ಗೂಗಲ್​ನ ಮಾತೃಸಂಸ್ಥೆ ಆಲ್ಫಬೆಟ್​ 33,838.15 ಕೋಟಿ ರೂ. ಹೂಡಿಕೆ ಮಾಡಿದೆ. ಈ ಹೂಡಿಕೆಗಾಗಿ ಜಿಯೋ ಪ್ಲಾಟ್​ಫಾರಂನ ಶೇ.7.7 ಷೇರುಗಳನ್ನು ಆಲ್ಫಬೆಟ್​ ಖರೀದಿಸಿದೆ. ಗೂಗಲ್​ನ ಈ ಹೂಡಿಕೆಯೊಂದಿಗೆ ಜಿಯೋ ಫ್ಲಾಟ್​ಫಾರಂನಲ್ಲಿ ವಿವಿಧ ವಿದೇಶಿ ಹೂಡಿಕೆದಾರರಿಂದ ಒಟ್ಟು 1,52,046.10 ಕೋಟಿ ರೂ. ಹೂಡಿಕೆ ಜಿಯೋ ಪಾಲಾಗಿದೆ. ಇತ್ತೀಚಿಗೆ ನಡೆದ ರಿಲಯನ್ಸ್​ ಇಂಡಸ್ಟ್ರೀಸ್​ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್​ ಅಂಬಾನಿ ಈ ವಿಷಯವನ್ನು ತಿಳಿಸಿದರು.