ವಿಶ್ವದಲ್ಲೇ ಅತ್ಯಂತ 'ಕಡಿಮೆ ಬೆಲೆ'ಯ COVID-19 ಟೆಸ್ಟ್ ಕಿಟ್ ಅವಿಸ್ಕರಿಸಿದ ದೆಹಲಿಯ IIT
Published by Basavaraj Halli
16 ಜುಲೈ 2020
ನವದೆಹಲಿ : ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ (ಐಐಟಿ) ದೆಹಲಿಯು ಜಗತ್ತಿನಲ್ಲಿಯೇ ಅತಿ ಕಡಿಮೆ ಬೆಲೆಯ ಕೋವಿಡ್ -19 ಪರೀಕ್ಷೆಯ ಕಿಟ್ ಅಭಿವೃದ್ಧಿಪಡಿಸಿದ್ದು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿಯ (HRD) ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ರಾಜ್ಯ ಸಚಿವ (HRD) ಸಂಜಯ್ ಧೋತ್ರೆ ಅವರು ಈ ಕೋವಿಡ್-19 ಪರೀಕ್ಷಾ ಕಿಟ್ ಗೆ ಚಾಲನೆ ನೀಡಿದರು.
* ವಿಶ್ವದ ಅತ್ಯಂತ ಕಡಿಮೆ ದರದಲ್ಲಿ ಕೋರೋಣ ಸೋಂಕು ಪರೀಕ್ಷಾ ಸೌಲಭ್ಯ ಪಡೆಯಬಹುದಾಗಿದೆ.
* ಇದು ಮೂರು ಗಂಟೆಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಇದು ಈಗ ಅಧಿಕೃತ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಬಳಸಲು ಲಭ್ಯವಾಗಲಿದೆ.