ಇಸ್ರೇಲ್ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಮುಂದಾದ ಭಾರತ
Published by Basavaraj Halli
16 ಜುಲೈ 2020
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗೆ ಚೀನಾ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಇಸ್ರೇಲ್ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಕೇಂದ್ರ ಸರ್ಕಾರವು ಇಸ್ರೇಲ್ನ ಅತ್ಯಾಧುನಿಕ ಹೆರಾನ್ ಡ್ರೋನ್, ಹಾಗೂ ಸ್ಪೈಕ್ ಆಂಟಿ ಟ್ಯಾಂಕ್ ಕ್ಷಿಪಣಿಗಳನ್ನು ತುರ್ತು ಖರೀದಿಸಲು ನಿರ್ಧರಿಸಿದ್ದು, ಲಡಾಖ್ನಲ್ಲಿ ಗಡಿ ಪ್ರದೇಶದಲ್ಲಿ ಚೀನಾದೊಂದಿಗೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾದ ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ತುರ್ತು ಹಣಕಾಸು ನಿಧಿಯಿಂದ ಹೆರೋನ್ ಮಾನವ ರಹಿತ ಡ್ರೋನ್ ಹಾಗೂ ಸ್ಪೈಕ್ ಆಂಟಿ ಟ್ಯಾಂಕ್ ಕ್ಷಿಪಣಿ ಖರೀದಿಸಲು ನಿರ್ಧರಿಸಿದೆ.