ನವದೆಹಲಿ : ಇ-ಕಾಮರ್ಸ್‌ನ ದೇಶಿ ದೈತ್ಯ ಸಂಸ್ಥೆಯಾದ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್‌, ವಾಲ್‌ಮಾರ್ಟ್‌ ನೇತೃತ್ವದಲ್ಲಿನ ಹೂಡಿಕೆದಾರರಿಂದ ₹9,056 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಿದೆ. ಪ್ರಸಕ್ತ ಹಣಕಾಸು ವರ್ಷದ ಈ ಹೂಡಿಕೆಯು ದೇಶದಲ್ಲಿ ಇ-ಕಾಮರ್ಸ್‌ ಮಾರುಕಟ್ಟೆ ವಿಸ್ತರಿಸಲು ಈ ಬಂಡವಾಳ ಹೂಡಿಕೆಗೆ ಸಂಸ್ಥೆಗೆ ನೆರವಾಗಲಿದೆ. * 2018ರಲ್ಲಿ ವಾಲ್‌ಮಾರ್ಟ್‌, ₹1.07 ಲಕ್ಷ ಕೋಟಿ ಮೊತ್ತದ ಬಂಡವಾಳ ತೊಡಗಿಸಿ ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಶೇ 77ರಷ್ಟು ಪಾಲು ಬಂಡವಾಳವನ್ನು ಖರೀದಿಸಿತ್ತು. * 2007ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ಫ್ಲಿಪ್‌ಕಾರ್ಟ್‌ ಎರಡು ವರ್ಷಗಳ ಹಿಂದೆ ಅಮೆರಿಕದ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ನ ಸ್ವಾಧೀನಕ್ಕೆ ಒಳಪಟ್ಟಿದೆ. * ಫ್ಲಿಪ್‌ಕಾರ್ಟ್‌ ಗ್ರೂಪ್‌, ಡಿಜಿಟಲ್‌ ಪಾವತಿಯ ಫೋನ್‌ಪೇ, ಫ್ಯಾಷನ್‌ ಕ್ಷೇತ್ರದ ಮಿಂತ್ರಾ ಮತ್ತು ಇಕಾರ್ಟ್‌ ತಾಣಗಳನ್ನೂ ಒಳಗೊಂಡಿದೆ.