ನವದೆಹಲಿ: ಭಾರತ, ಅಮೆರಿಕ, ಜಪಾನ್​ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಜಂಟಿಯಾಗಿ "ಮಲಬಾರ್​ ನೌಕಾ ಸಮರಾಭ್ಯಾಸ" ಎಂಬ ಹೆಸರಿನ ಈ ಸಮರಭ್ಯಾಸ 2020 ವರ್ಷದ ಕೊನೆಯಲ್ಲಿ ನಡೆಸಲು ಮುಂದಾಗಿವೆ. ಪ್ರತಿ ಬಾರಿ ಸಾಮಾನ್ಯವಾಗಿ ಭಾರತ, ಅಮೆರಿಕ ಮತ್ತು ಜಪಾನ್​ನ ನೌಕಾಪಡೆಗಳು ಮಾತ್ರವೇ ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಆಸ್ಟ್ರೇಲಿಯಾವನ್ನು ಸೇರಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. * ಒಂದು ವೇಳೆ ಆಸ್ಟ್ರೇಲಿಯಾವನ್ನು ಈ ಸಮರಾಭ್ಯಾಸಕ್ಕೆ ಸೇರಿಸಿಕೊಳ್ಳಲು ಭಾರತ ನಿರ್ಧರಿಸಿದರೆ, ಇಂಡೋ-ಪೆಸಿಫಿಕ್​ ಮಹಾಸಾಗರದ ವ್ಯಾಪ್ತಿಯಲ್ಲಿ ಚತುಷ್ಕೋನ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಒದಗಲಿದೆ. * ಈ ಮೂಲಕ ಜಾಗತಿಕವಾಗಿ ಚೀನಾ ವಿರೋಧಿ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಸಂಸತ್​ ಸದಸ್ಯ ಜಾನ್​ ಕೆನಡಿ ಹೇಳಿಕೆ ಮುನ್ನೆಲೆಗೆ ಬಂದಂತಾಗುತ್ತದೆ.