ಕೊರೊನಾ ನಿಯಂತ್ರಣ: ಮುಂಬೈನ ಧಾರಾವಿ ಸ್ಲಂ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ
Published by Basavaraj Halli
11 ಜುಲೈ 2020
ಮುಂಬೈ : ಕಳೆದ ಕೆಲವು ದಿನಗಳ ಹಿಂದೆ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಮಹಾರಾಷ್ಟ್ರದ ಮುಂಬೈ ನಗರದ ಧಾರಾವಿ ಸ್ಲಮ್ ನಲ್ಲಿ ಪ್ರಸ್ತುತ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವದನ್ನು ಪರಿಗಣಿಸಿರುವ ವಿಶ್ವ ಅರೋಗ್ಯ ಸಂಸ್ಥೆಯು ಧಾರಾವಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ.
* ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದುಕೊಂಡಿದ್ದ ಮುಂಬೈನ ಈ ಸ್ಲಂ ಕೋರೋಣ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇತರೆ ಎಲ್ಲ ರಾಜ್ಯ ಹಾಗೂ ಪ್ರಮುಖ ಪ್ರದೇಶಗಳಿಗೆ ಉತ್ತಮ ನಿದರ್ಶನವಾಗಿದೆ ಎಂದು ವಿಶ್ವ ಸಂಸ್ಥೆಯಾ ನಿರ್ದೇಶಕ ಡೋಸ್ ಅಧನೊಮ್ ಗೆಬ್ರೆಯೋಸಿಸ್ ತಿಳಿಸಿದ್ದಾರೆ.