3,992 ಭಾರತೀಯ ನಾಗರಿಕರನ್ನು ತಾಯ್ನಾಡಿಗೆ ಕರೆತರುವ ಮೂಲಕ ಭಾರತೀಯ ನೌಕಾಪಡೆಯಿಂದ ‘ಆಪರೇಷನ್ ಸಮುದ್ರ ಸೇತು’ ಪೂರ್ಣ
Published by Basavaraj Halli
09 ಜುಲೈ 2020
ವಿದೇಶದಿಂದ ಭಾರತೀಯ ನಾಗರಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿ, ಭಾರತ ಸರ್ಕಾರವು "ವಂದೇ ಭಾರತ" ಸೇರಿ ಹಲವು ಆಪರೇಷನ್ ಗಳನ್ನೂ ಕೈಗೊಂಡಿತ್ತು, ಅವುಗಳ ಪೈಕಿ ಭಾರತೀಯ ನೌಕಾಪಡೆಯ "ಸಮುದ್ರ ಸೇತು" ಕೂಡ ಒಂದು. 2020 ರ ಮೇ 5 ರಂದು ಭಾರತೀಯ ನೌಕಾಪಡೆಯು "ಆಪರೇಷನ್ ಸಮುದ್ರ ಸೇತು" ಆರಂಬಿಸಿತು ಹಾಗೂ ಒಟ್ಟು 55 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ 3,992 ಭಾರತೀಯ ನಾಗರಿಕರನ್ನು ಮರಳಿ ಭಾರತೀಯ ನೌಕಾಪಡೆಯು ತಾಯ್ನಾಡಿಗೆ ಕರೆತಂದಿತು.
ಈ ಮೊದಲು 2015 ರಲ್ಲಿ ಭಾರತೀಯ ನೌಕಾಪಡೆಯು "ಆಪರೇಷನ್ ರಾಹತ್" ಹೆಸರಿನ ಕಾರ್ಯಾಚರಣೆಯಲ್ಲಿ 5600 ಜನರನ್ನು (960 ವಿದೇಶಿ ಪ್ರಜೆಗಳು, ಉಳಿದ ಭಾರತೀಯ ನಾಗರಿಕರು) ಯೆಮನ್ನಿಂದ ಕರೆತಂದಿತ್ತು.