PMAY-U ಅಡಿಯಲ್ಲಿ ನಗರ ವಲಸಿಗರಿಗೆ/ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣ(ARHC) ಅಭಿವೃದ್ಧಿಪಡಿಸಲು ಕ್ಯಾಬಿನೆಟ್ ಅನುಮೋದನೆ
Published by Basavaraj Halli
09 ಜುಲೈ 2020
ಆತ್ಮ ನಿರ್ಭರ ಭಾರತ್ ಯೋಜನೆಯ ಭಾಗವಾಗಿ 2020 ರ ಜುಲೈ 8 ರಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ "ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (Affordable Rental Housing Complexes(ARHC)) ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಯಿತು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ಅರ್ಬನ್ (ನಗರ) (PMAY-U) ಅಡಿಯಲ್ಲಿ ಉಪ-ಯೋಜನೆಯಾಗಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು(ARHC) ನಗರ ವಲಸಿಗರು / ಬಡವರಿಗಾಗಿ ಅಭಿವೃದ್ಧಿಪಡಿಸಲಾಗುವುದು.
ಈ ಬಾಡಿಗೆ ವಸತಿ ಸಂಕೀರ್ಣಗಳನ್ನು ದೇಶದ ನಗರ ಕೇಂದ್ರಗಳಲ್ಲಿ ನಿರ್ಮಿಸಲಾಗುತ್ತಿದ್ದು, ಅಲ್ಲಿ ಈ ವಲಸೆ ಕಾರ್ಮಿಕರು ಕೈಗೆಟುಕುವ ಬಾಡಿಗೆಗೆ ಮನೆಗಳನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.