ಕಿರಿಯ ಅಥ್ಲೀಟ್ಗಳಿಗೂ 'ಟಾಪ್ಸ್'ಯೋಜನೆ ವಿಸ್ತರಣೆ : ಕೇಂದ್ರ ಸಚಿವ ರಿಜಿಜು
Published by Surekha Halli
06 ಜುಲೈ 2020
ನವದೆಹಲಿ : 2028 ರಲ್ಲಿ ನಡೆಯುವ ಒಲಿಂಪಿಕ್ಸ್ಗೆ ಪೂರ್ವ ತಯಾರಿಗಾಗಿ ಚಾಂಪಿಯನ್ ಕ್ರೀಡಾಪಟುಗಳನ್ನು ರೂಪಿಸುವ ಉದ್ದೇಶದೊಂದಿಗೆ ಜೂನಿಯರ್ ಅಥ್ಲೀಟ್ಗಳಿಗೂ ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯನ್ನು (ಟಾಪ್ಸ್) ಶೀಘ್ರ ಆರಂಭಿಸಲಾಗುವುದೆಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.
ಇತ್ತೀಚಿಗೆ ನಡೆದ 'ಫಿಟ್ ಹೈ ತೋ ಹಿಟ್ ಹೈ ಫಿಟ್ ಇಂಡಿಯಾ' ಎಂಬ ವೆಬಿನಾರ್ನಲ್ಲಿ ಕ್ರೀಡಾ ಸಚಿವ ರಿಜಿಜು ಅವರು ಈ ವಿಷಯ ಪ್ರಕಟಿಸಿದರು.