ಭಾರತದ ಮೊದಲ ಅಧಿಕೃತ ಸಾಮಾಜಿಕ ಮಾಧ್ಯಮ 'ಎಲಿಮೆಂಟ್ಸ್' ಆಯಪ್ ಬಿಡುಗಡೆ
Published by Basavaraj Halli
06 ಜುಲೈ 2020
ನವದೆಹಲಿ : ಭಾರತದ ಮೊದಲ ಅಧಿಕೃತ ಸಾಮಾಜಿಕ ಮಾಧ್ಯಮ ಸೂಪರ್ ಅಪ್ಲಿಕೇಶನ್ ಎಂದು ಹೇಳಿಕೊಳ್ಳುವ "ಎಲಿಮೆಂಟ್ಸ್ ಆಯಪ್" ಅನ್ನು ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇತ್ತೀಚಿಗೆ ಬಿಡುಗಡೆ ಮಾಡಿದರು.
ಈ ನೂತನ ಸಾಮಾಜಿಕ ಮಾಧ್ಯಮ ಅಯಪ್ ನ್ನು ಶ್ರೀ ರವಿ ಶಂಕರ ಗುರೂಜಿ ಯವರ ಸಾರಥ್ಯದ ಆರ್ಟ್ ಆಫ್ ಲಿವಿಂಗ್ನ ಸ್ವಯಂಸೇವಕರಾಗಿರುವ ಸಾವಿರಕ್ಕೂ ಹೆಚ್ಚು ಐಟಿ ವೃತ್ತಿಪರರು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
* ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ, ಆಯಪ್ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನಂತಹವರೊಂದಿಗೆ ಈ ಎಲಿಮೆಂಟ್ಸ್ ಆಯಪ್ ಸ್ಪರ್ಧಿಸಲಿದೆ.
* ಒಟ್ಟು 08 ಭಾಷೆಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.
* ಅಪ್ಲಿಕೇಶನ್ ಮೂಲಕ ಬಳಕೆದಾರರು "ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು, ಸಂಭಾಷಿಸಬಹುದು, ಮಾಹಿತಿಯನ್ನು ಹಂಚಿಕೊಳ್ಳಬಹುದು, ಸಮಾನ ಮನಸ್ಕ ಜನರೊಂದಿಗೆ ನೆಟ್ವರ್ಕ್ ಮಾಡಬಹುದು, ತಡೆರಹಿತ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಕೂಡ ಮಾಡಬಹುದು.