ಸುಮಾರು 1,48,938 ಕೋಟಿ ರೂ. ಆಹಾರ ಧಾನ್ಯಗಳು ಹಾಗೂ ಬೇಳೆಕಾಳುಗಳನ್ನು ಏಪ್ರಿಲ್ ನಿಂದ ನವೆಂಬರ್ ವರೆಗೆ ವಿತರಣೆ
Published by Siddaram Halli
01 ಜುಲೈ 2020
2020 ನೇ ವರ್ಷದ ಏಪ್ರಿಲ್ನಿಂದ ನವೆಂಬರ್ ವರೆಗೆ 8 ತಿಂಗಳ ಅವಧಿಯಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅಂದಾಜು 1,48,938 ಕೋಟಿ ರೂ.ಗಳ ಆಹಾರ ಧಾನ್ಯಗಳು (ಅಕ್ಕಿ ಮತ್ತು ಗೋಧಿ) ಮತ್ತು ದ್ವಿದಳ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಂದಾಜು ಮಾಡಿದೆ.
ಹಿಂದಿನ ಮೂರು ತಿಂಗಳ ಏಪ್ರಿಲ್ ನಿಂದ ಜೂನ್ ವರೆಗೆ ಟಾರ್ಗೆಟೆಡ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (ಟಿಪಿಡಿಎಸ್) ಆಧರಿಸಿ ಈ ಅಂದಾಜು ಮೊತ್ತವನ್ನು ಲೆಕ್ಕಹಾಕಲಾಗಿದೆ.
* ಯೋಜನೆಯಡಿಯಲ್ಲಿ, ಫಲಾನುಭವಿ ಕುಟುಂಬದ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆಜಿ ಅಕ್ಕಿ / ಗೋಧಿಯನ್ನು ಉಚಿತವಾಗಿ ನೀಡಲಾಗುತ್ತದೆ, ಅಲ್ಲದೆ ಪ್ರತಿ ಫಲಾನುಭವಿ ಕುಟುಂಬಕ್ಕೆ ತಿಂಗಳಿಗೆ 1 ಕೆಜಿ ದ್ವಿದಳ ಧಾನ್ಯಗಳನ್ನು ನೀಡಲಾಗುತ್ತದೆ.