ಕೇಂದ್ರೀಕೃತ ವ್ಯವಸ್ಥೆಯಡಿಯಲ್ಲಿ ಸ್ಟ್ಯಾಂಪ್ ಡ್ಯೂಟಿ ಸಂಗ್ರಹ ಜಾರಿ
Published by Siddaram Halli
01 ಜುಲೈ 2020
ಹಣಕಾಸು ಕಾಯ್ದೆ 2019 ರ ಮೂಲಕ, 1899 ರ ಭಾರತೀಯ ಅಂಚೆಚೀಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ತಿದ್ದುಪಡಿಗಳ ಅನುಸಾರ ಇದೆ ಜುಲೈ 1, 2020 ರಿಂದ ಏಕೀಕೃತ ದರದೊಂದಿಗೆ ಸ್ಟ್ಯಾಂಪ್ ಡ್ಯೂಟಿ ಸಂಗ್ರಹ ಜಾರಿಗೆ ಬರಲಿದೆ. ಮಾರುಕಟ್ಟೆಯನ್ನು ವಿಸ್ತರಿಸಲು ಮತ್ತು ಸುಲಭವಾದ ವ್ಯವಹಾರವನ್ನು ಹೆಚ್ಚಿಸಲು ಈ ತಿದ್ದುಪಡಿಗಳನ್ನು ಮಾಡಲಾಗಿದೆ.
* ಈ ತಿದ್ದುಪಡಿಯನುಸಾರ ಎಲ್ಲಾ ಹಣಕಾಸು ಭದ್ರತಾ ವಹಿವಾಟುಗಳಿಗೆ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಅಂಚೆಚೀಟಿ ವಿಧಿಸಲಾಗುವುದು.