ನವದೆಹಲಿ : ರಾಜ್ಯ ರಾಜಧಾನಿ ಬೆಂಗಳೂರು ನಗರವು ಈಗ ಏಷ್ಯಾದ “ಸಿಲಿಕಾನ್‌ ಸಿಟಿ’ ಮಾತ್ರವಲ್ಲದೇ, ಸ್ಟಾರ್ಟ್‌ಅಪ್‌ ಗಳ ತವರು ಎಂದು ಕೂಡ ಹೆಸರಾಗಿದೆ. ಕ್ಯಾಲಿಫೋರ್ನಿಯಾ ಸ್ಟಾರ್ಟ್‌ಅಪ್‌ ಜಿನೊಮ್‌ ಎಂಬ ಕಂಪೆನಿ ಸಿದ್ಧಪಡಿಸಿರುವ “ಜಾಗತಿಕ ಸ್ಟಾರ್ಟ್‌ಅಪ್‌ ಸೌಲಭ್ಯ ವರದಿ 2020’ರಲ್ಲಿ ಸ್ಟಾರ್ಟ್‌ಅಪ್‌ ಗಳಿಗೆ ಪೂರಕವಾದ ಸೌಲಭ್ಯ ಕಲ್ಪಿಸುವ ವಿಶ್ವದ ಪ್ರಮುಖ 30 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 26ನೇ ಸ್ಥಾನ ಲಭಿಸಿದೆ. * ಸ್ಟಾರ್ಟ್‌ಅಪ್‌ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 26ನೇ ಸ್ಥಾನ. ದಿಲ್ಲಿಗೆ 36ನೇ ಸ್ಥಾನ. * ಯಶಸ್ವೀ ಸ್ಟಾರ್ಟ್‌ಅಪ್‌ ಗಳ ವಿಶ್ವದ ಅಗ್ರ ನಗರಗಳ ಪಟ್ಟಿಯಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್‌ ವ್ಯಾಲಿಗೆ ಮೊದಲ ಸ್ಥಾನ. * ಬಂಡವಾಳ, ಹೂಡಿಕೆ ಮತ್ತು ಜಾಗತಿಕ ಪ್ರತಿಭೆಗಳಿಗೆ ಪ್ರವೇಶದಲ್ಲಿ ಲಂಡನ್‌ಗೆ 2ನೇ ಸ್ಥಾನ.