ಭಾರತ ಮೊದಲ ಕ್ರಿಕೆಟ್ ವಿಶ್ವ ಕಪ್ ವಿಜಯಕ್ಕೆ 37 ವರ್ಷದ ಸಂಭ್ರಮ
Published by Basavaraj Halli
26 ಜೂನ್ 2020
ಭಾರತ ಕ್ರಿಕೆಟ್ ಇತಿಹಾಸದಲ್ಲಿ ದಿನಾಂಕ 25 ಜೂನ್ ಐತಿಹಾಸಿಕ ದಿನವಾಗಿದೆ. ಇದೆ ದಿನಾಂಕದಂದು 37 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡ ನಾಯಕ ಕಪಿಲ್ ದೇವ್ ಅವರ ಸಾರಥ್ಯದಲ್ಲಿ ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.
* ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 1983ರ ಜೂನ್ 25ರಂದು ಮೂರನೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತವು 43 ರನ್‍ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.