ಮಾಸ್ಕೋ : 2ನೇ ಮಹಾಯುದ್ಧದಲ್ಲಿ ರಷ್ಯಾ ಹಾಗೂ ಮಿತ್ರ ರಾಷ್ಟ್ರಗಳು ವಿಜಯ ಸಾದಿಸಿದ ಹಿನ್ನಲೆ ರಷ್ಯಾ ಆಯೋಜಿಸಿದ್ದ 75ನೇ ವಾರ್ಷಿಕ ಸಂಭ್ರಮದಲ್ಲಿ ಭಾರತೀಯ ಮೂರೂ ಸಶಸ್ತ್ರ ಪಡೆಗಳು ಪಾಲ್ಗೊಂಡಿದ್ದವು. * ವಿಜಯ ದಿನದ ಪರೇಡ್‌ನ‌ಲ್ಲಿ ಭಾರತೀಯ ಮೂರೂ ಸೇನಾ ವಿಭಾಗದಿಂದ ಸುಮಾರು 75 ವೀರಯೋಧರ ಶಿಸ್ತುಬದ್ಧ ಪಥಸಂಚಲನ ಆಕರ್ಷಕವಾಗಿತ್ತು. * ಮಾಸ್ಕೋದ ರೆಡ್‌ ಸ್ಕ್ವೇರ್‌ನಲ್ಲಿ ನಡೆದ ವಿಕ್ಟರಿ ಡೇ ಪರೇಡ್‌ಗೆ ಭಾರತದಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಭಾಗವಹಿಸಿದ್ದರು. * ಕೊರೊನಾ ಸೋಂಕಿನ ಭೀತಿಯಿಂದ ಈ ವರ್ಷ ವಿಕ್ಟರಿ ಪರೇಡ್‌ ನ್ನು ತಡವಾಗಿ ಆಯೋಜಿಸಲ್ಪಟ್ಟಿದ್ದು, ಈ ಪೆರೇಡನಲ್ಲಿ ರಷ್ಯಾದ 13,000 ಸೈನಿಕರು ಭಾಗಿಯಾಗಿದ್ದರು.