ಜೂನ್ 25 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು :
Published by Basavaraj Halli
26 ಜೂನ್ 2020
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳ ವಿವಿರ ಈ ಕೆಳಗಿನಂತಿದೆ
* ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಅನುಮೋದನೆ
* ಎಲೆಕ್ಟ್ರಿಕಲ್ ವೆಹಿಕಲ್ ಪ್ರೊಡಕ್ಷನ್ ಗೆ ತೆರಿಗೆ ವಿನಾಯಿತಿ
* ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194 ಕೋಟಿ ರೂ ಬಿಡುಗಡೆ
* ಪದ್ಮ ಶ್ರೀ ಪ್ರಶಸ್ತಿ ನೀಡಲು ಕ್ಯಾಬಿನೆಟ್ ಸಬ್ ಕಮಿಟಿ, ಸಿಎಸ್ ನೇತೃತ್ವದಲ್ಲಿ ಸಬ್ ಕಮಿಟಿ ರಚನೆ
* ಜೀವ ರಕ್ಷಕ ಸಾಧನಗಳ(Advance life support) ಒಳಗೊಂಡ ಆಯಂಬುಲೆನ್ಸ್ 120 ಗಳನ್ನು 32.04 ಕೋಟಿ ರೂ ಖರೀದಿಗೆ ಅನುಮೋದನೆ
* ಸಚಿವರು,ಶಾಸಕರು, ಪರಿಷತ್ ಸದಸ್ಯರ ಸಂಬಳದ 30% ಕಡಿತಗೊಳಿಸಲು ಕಾಯ್ದೆಗೆ ತಿದ್ದುಪಡಿ