ಕೇರಳದಲ್ಲಿ ಗರ್ಭಿಣಿ ಆನೆಯ ದುರಂತ ಸಾವು ಪ್ರಕರಣ :
Published by Basavaraj Halli
05 ಜೂನ್ 2020
ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಕಾಡಾನೆಗೆ ಪಟಾಕಿ ತುಂಬಿದ ಪೈನಾಪಲ್ ತಿನ್ನಿಸಿ ಆ ಆನೆಯ ಸಾವಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವಂತೆ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಲಗುತ್ತಿದೆ.
* ಘಟನೆ ಹಿನ್ನಲೆ :
ಕೇರಳದ ಪಲಕ್ಕಾಡ್ನ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ (SVNP)ನ ಗರ್ಭಿಣಿ ಆನೆಯೊಂದು ಆಹಾರ ಅರಸುತ್ತ ಮೇ 27ರಂದು ಊರೊಳಗೆ ಪ್ರವೇಶಿಸಿತ್ತು, ಯಾರೋ ಕಿಡಿಗೇಡಿಗಳು ಆಹಾರ ಹುಡುಕಿ ಬಂದ ಆನೆಗೆ ಯಾರೋ ಆನೆಗೆ ತಿನ್ನಲು ಸ್ಪೋಟಕ ತುಂಬಿದ ಪೈನಾಪಲ್ ಹಣ್ಣನ್ನು ತಿನ್ನಲು ನೀಡಿದ ಹಿನ್ನಲೆ ಅದರೊಳಗಿದ್ದ ಮದ್ದು ಗುಂಡು ಸ್ಫೋಟವಾಯಿ ಆನೆಯ ಬಾಯಿಗೆ ತೀವ್ರ ಗಾಯವಾಗಿತ್ತು. ಈ ಸ್ಪೋಟದಿಂದಾದ ನೋವನ್ನು ತಡೆಯಲು ಕಾಡಿನೊಳಗೆ ಸೇರಿಕೊಂಡ ಆನೆ ನಂತರ ವೆಲ್ಲಿಯಾರ್ ನದಿಯೊಳಗೆ ಇಳಿದು ತನ್ನ ಬಾಯಿ, ಸೊಂಡಿಲನ್ನು ನೀರಿನಲ್ಲಿಟ್ಟುಕೊಂಡು ನಿಂತು ಅಲ್ಲೇ ತನ್ನ ಪ್ರಾಣ ತ್ಯಜಿಸಿದೆ.
* ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರತನ್ ಟಾಟಾ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಸಿನಿಮಾ ನಟರು, ಕ್ರಿಕೆಟಿಗರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನ ಆನೆಯ ದುರಂತ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
* ಈ ಅಮಾನುಷ ಘಟನೆಯ ಕುರಿತು ಕೇಂದ್ರ ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಕೇರಳ ಸರ್ಕಾರದಿಂದ ವರದಿ ತರಿಸಿಕೊಂಡು ತಪ್ಪಿಸ್ಥತ್ತರ ವಿರುದ್ಧ ಕ್ರಮಕೈಗೊಳ್ಳಾಗುವುದೆಂದು ತಿಳಿಸಿದ್ದಾರೆ.