ಹೈನುಗಾರಿಕಾ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದ ಕೇಂದ್ರ ಸರ್ಕಾರ
Published by Basavaraj Halli
03 ಜೂನ್ 2020
ಹೈನುಗಾರಿಕಾ ರೈತರಿಗೆ ಸಹಾಯ ಮಾಡಲು ಜೂನ್ 2, 2020 ರಂದು ಭಾರತ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನವನ್ನು ಪ್ರಾರಂಭಿಸಿತು. ಈ ಅಭಿಯಾನದಡಿ ಸುಮಾರು 1.5 ಕೋಟಿ ಹೈನುಗಾರಿಕಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಯೋಜಿಸಲಾಗುವದು.
ಈ ಯೋಜನೆಯಡಿ, ಹಾಲು ಉತ್ಪಾದಿಸುವ ಒಕ್ಕೂಟಗಳೊಂದಿಗೆ ವಹಿವಾಟು ನಡೆಸುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಭಾರತ ಸರ್ಕಾರ ನೀಡಲಿದೆ. ಭಾರತದಲ್ಲಿ ಹಾಲು ಒಕ್ಕೂಟದೊಂದಿಗೆ ವ್ಯವಹರಿಸುವ ಸುಮಾರು 1.7 ಕೋಟಿ ರೈತರು ಸಂಬಂಧ ಹೊಂದಿದ್ದಾರೆ.
* 1.5 ಕೋಟಿ ಡೈರಿ ರೈತರಿಗೆ ಕಿಸಾನ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸುವ ಈ ಅಭಿಯಾನವು ಲಾಕ್ ಡೌನ್ ಸಮಯದಲ್ಲಿ ಪ್ರಧಾನಿಯವರು ಘೋಷಿಸಿದ "ಆತ್ಮ ನಿರ್ಭಾರ್ ಭಾರತ್ ಅಭಿಯಾನ"ದ ಒಂದು ಭಾಗವಾಗಿದೆ.